Tuesday, March 18, 2025

ಗುಡ್ ನ್ಯೂಸ್ ಕೊಟ್ಟ ಕೆಎಲ್ ರಾಹುಲ್ – ಆಥಿಯಾ ಶೆಟ್ಟಿ..! ಸುನಿಲ್ ಶೆಟ್ಟಿ ಏನಂದ್ರು.?

ಟೀಮ್​ ಇಂಡಿಯಾದ ಸ್ಟಾರ್​​​ ವಿಕೆಟ್​​​ ಕೀಪರ್ ಕೆ.ಎಲ್​ ರಾಹುಲ್​​ ತಮ್ಮ ಅಭಿಮಾನಿಗಳಿಗೆ ಶುಭ ಸುದ್ದಿ ಕೊಟ್ಟಿದ್ದಾಗಿ ಸುದ್ದಿ ವಾಹಿನಿಗಳು ವರದಿ ಮಾಡಿದ ಬೆನ್ನಲ್ಲೇ ಈ ಸಿಹಿ ಸುದ್ದಿಯ ಅಸಲಿಯತ್ತೇನು ಅನ್ನೋದನ್ನ ಗೂಗಲ್ ನಲ್ಲಿ ಹುಡುಕಾಟ‌ ನಡೆಸಿದ್ದಾರೆ.

ಕೆ.ಎಲ್​​ ರಾಹುಲ್​​, ಬಾಲಿವುಡ್ ನಟಿ ಅಥಿಯಾ ಶೆಟ್ಟಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಸ್ವತಃ ಆಥಿಯಾ ತಂದೆಯೇ ಮೌನ‌ ಮುರಿದಿದ್ದಾಗಿ ವರದಿಯಾಗಿದೆ.‌

ಕಳೆದ ವರ್ಷ ಜನವರಿಯಲ್ಲಿ ಮುಂಬೈನ ಖಂಡಾಲಾದ ಖಾಸಗಿ ಫಾರ್ಮ್ ಹೌಸ್‌ನಲ್ಲಿ ಬಾಲಿವುಡ್​ ನಟ ಸುನೀಲ್​​ ಶೆಟ್ಟಿ ಮಗಳು ಅಥಿಯಾ ಶೆಟ್ಟಿ ಹಾಗೂ ಕನ್ನಡಿಗ ಕ್ರಿಕೆಟರ್​ ಕೆ.ಎಲ್ ರಾಹುಲ್ ಮದುವೆ ಆಗಿದ್ದರು. ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲೇ ವೈವಾಹಿಕ ಜೀವನಕ್ಕೆ ಕಾಲಿರಿಸಿದರು.

ಇನ್ನು, ಮದುವೆ ಆಗಿ ಒಂದು ವರ್ಷ ಕಳೆಯುತ್ತಿದ್ದಂತೆಯೇ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಆಥಿಯಾ ಗರ್ಭಿಣಿಯಾಗಿದ್ದಾರೆ. ಈ ಬಗ್ಗೆ ಖುದ್ದು ತಂದೆ ಸುನೀಲ್​ ಶೆಟ್ಟಿ ಅವರೇ ಮೌನಮುರಿದಿದ್ದಾರೆ. ಡ್ಯಾನ್ಸ್ ದಿವಾನೆ ಎನ್ನುವ ಡ್ಯಾನ್ಸ್ ಶೋನಲ್ಲಿ ಸುನಿಲ್ ಶೆಟ್ಟಿ ತೀರ್ಪುಗಾರಿಕೆಯಲ್ಲಿ ನಡೆಯುವ ಶೋ ನಲ್ಲಿ ನಿರೂಪಕಿ, ಹಾಸ್ಯ ಕಲಾವಿದೆ‌ ಭಾರತಿ ಅನ್ನುವವರು ಈ ಬಗ್ಗೆ ಮಾತು ತೆಗಿದಿದ್ದಾರೆ. ಈ ವೇಳೆ ಉತ್ತರಿಸಿರುವ ಸುನಿಲ್ ಶೆಟ್ಟಿ ಮುಂದಿನ ಶೋ ನಲ್ಲಿ‌ ನಾನು ತಾತನ ರೀತಿ ಸ್ಟೇಜ್‌ಗೆ ನಡೆದುಕೊಂಡು ಬರುತ್ತೇನೆ ಎಂದಿದ್ದಾರೆ. ಹಾಗೆಂದ ಮಾತ್ರಕ್ಕೆ ಆಥಿಯಾ ಗರ್ಭಿಣಿಯಾಗಿರೋದು ಖಚಿತವಾಗಿಲ್ಲ.

2024ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​​ನಲ್ಲಿ ಕೆ.ಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇತ್ತೀಚಿಗೆ ಜೈಪುರದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯಕ್ಕೆ ರಾಹುಲ್​ ಮುನ್ನಡೆಸುವ ಲಕ್ನೋ ತಂಡವನ್ನು ಬೆಂಬಲಿಸಲು ಅಥಿಯಾ ಶೆಟ್ಟಿ ಆಗಮಿಸಿದ್ದರು. ಈ ವೇಳೆ ಆಥಿಯಾ ಗರ್ಭಿಣಿಯಂತೆ ಕಂಡಿಲ್ಲ. ಇದು ಆಥಿಯಾ ಶೆಟ್ಟಿ ಗರ್ಭಿಣಿಯಲ್ಲ ಎಂದು ನೆಟ್ಟಿಗರು ಹೇಳಿದ್ದಾರೆ. ಈ ಬಗ್ಗೆ ಆಥಿಯಾ ಶೆಟ್ಟಿ ಈವರೆಗೂ ಮಾತಾಡಿಲ್ಲ.

Related Articles

Latest Articles