Tuesday, July 23, 2024

ನಿಂತು ಹೋದ ತಿಥಿ ಕಾರ್ಯದಂದೇ ಬಂದೇ ಬಿಟ್ಳು ಸಹನಾ..! ಕಥೆಗೆ ಟ್ವಿಸ್ಟ್

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಧಾರಾವಾಹಿಗಳು ಜನರಿಗೆ ಅಚ್ಚುಮೆಚ್ಚು.‌ಅದರಲ್ಲೂ ಪುಟ್ಟಕ್ಕನ ಮಕ್ಕಳು ಸೀರಿಯಲ್ ಟಿಆರ್‌ಪಿಯಲ್ಲಿ ಸದಾ ಮುಂದಿರುತ್ತದೆ. ಹೊಸ ಹೊಸ ತಿರುವುಗಳೊಂದಿಗೆ ಕಥೆ ಹೆಣೆದು ಉಣಬಡಿಸಲಾಗುತ್ತಿದೆ‌.

ಪುಟ್ಟಕ್ಕನಾಗಿ ಅಭಿನಯ ಮಾಡುತ್ತಿರುವ ಉಮಾಶ್ರೀ ಅವರು ತಮ್ಮ ನಟನೆಯಿಂದಲೇ ಎಲ್ಲರನ್ನು ಸೆಳೆಯುತ್ತಿದ್ದಾರೆ. ಸದ್ಯ ಕತೆಯಲ್ಲಿ ಸಹನಾ ಮೃತಳಾಗಿದ್ದಾಳೆ.

ಮನೆಯವರ ಪಾಲಿಗೆ ಸಹನಾ ಇನ್ನಿಲ್ಲ.
ಮನೆಯವರ ಪಾಲಿಗೆ ಸಹನಾ ಸತ್ತಿದ್ದಾಳೆ. ಆದರೆ ವೀಕ್ಷಕರಿಗೆ ಸಹನಾ ಸತ್ತಿಲ್ಲ, ಬದುಕಿದ್ದಾಳೆ ಅನ್ನವುದು ಗೊತ್ತು.‌ ಸಹನಾ ಹೋಲಿಕೆಯ ದೇಹ ಸುಟ್ಟ ನಂತರ ಕಾರ್ಯ ನಡೆಯುವ ಹೊತ್ತಲ್ಲೇ ಕಣಿ ಹೇಳುವಾಕೆ‌ ಮನೆಗೆ ಬಂದಿದ್ದಳು. ಕಣಿ‌ ಹೇಳುವಾಕೆ ಮಗಳು ಚಿಲುಮೆಯಾಗಿ ಬರುತ್ತಾಳೆ ಎಂದಿದ್ದಳು.

ಆಧಾರ್ ಕಾರ್ಡ್ ನೆಪಕ್ಕೆ‌ ಮನೆಗೆ ಬಂದ ಸಹನಾ
ಇನ್ನು ಪೇಟೆಯಲ್ಲಿರುವ ಸಹನಾಗೆ ತನ್ನ ಮಿನಿ ಕ್ಯಾಂಟೀನ್ ‌ನಡೆಸಲು ದಾಖಲೆಗಳ ಅವಶ್ಯಕತೆ ಇದೆ. ಹೀಗಾಗಿ ಮನೆಗೆ ಮತ್ತೆ ಬರುವಂತಾಗಿದೆ. ಮಾಸ್ಕ್ ಹಾಕಿಕೊಂಡು ಪುಟ್ಟಕ್ಕನ ಮನೆಗೆ ಬಂದಿದ್ದಾಳೆ. ಮನೆಯಲ್ಲಿ‌ ತಿಥಿ‌ಕಾರ್ಯ ನಡೆಯುತ್ತಿದೆ. ಮುಂದೆ ಏನಾಗುತ್ತದೆ ಎಂಬುವುದು ಟ್ವಿಸ್ಟ್.‌

Related Articles

Latest Articles