ಬೆಂಗಳೂರು: ಪೋಕ್ಸೋ ಕೇಸ್‌ನಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪಗೆ ರಿಲೀಫ್ ಸಿಕ್ಕಿದೆ. ಮುಂದಿನ ವಿಚಾರಣೆ ತನಕ ಅರೆಸ್ಟ್ ಮಾಡುವಂತಿಲ್ಲ. ಬಲವಂತದ ಕ್ರಮ ತೆಗೆದುಕೊಳ್ಳದಂತೆ ಕೋರ್ಟ್ ಮಹತ್ವದ ಆದೇಶ ನೀಡಿದೆ.
ಯಡಿಯೂರಪ್ಪ ಓರ್ವ ಮಾಜಿ ಸಿಎಂ. ಜೀವನದ ಸಂದ್ಯಾಕಾಲದಲ್ಲಿ ಇದ್ದಾರೆ. ಅವರ ಕಸ್ಟಡಿಯ ವಿಚಾರಣೆ ಅಗತ್ಯ ಕಾಣ್ತಾ ಇಲ್ಲ. ಆರೋಗ್ಯದ ಸಮಸ್ಸೆಗಳು ಇರುತ್ತವೆ. ಆರೋಪಿ ಓಡಿ ಹೋಗುವ ಅಂಶಗಳು ಕಂಡು ಬರ್ತಿಲ್ಲ. ಎರಡು ವಾರದ ನಂತರ ಅರ್ಜಿ ವಿಚಾರಣೆ ನಡೆಯಲಿದೆ. ಅಲ್ಲಿಯ ತನಕ ಯಾವುದೇ ಅರೆಸ್ಟ್ ಮಾಡುವಂತಿಲ್ಲ ಎಂದು ನ್ಯಾಯಾಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರು ಆದೇಶ ನೀಡಿದ್ದಾರೆ.
ಬಿ.ಎಸ್ ಯಡಿಯೂರಪ್ಪ ವಿರುದ್ಧ ಅರೆಸ್ಟ್ ವಾರಂಟ್ ಜಾರಿಯಾದ ಹಿನ್ನೆಲೆಯಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ನೇತೃತ್ವದ ಪೀಠದಲ್ಲಿ ಬಿಎಸ್‌ವೈ ಜಾಮೀನು ವಿಚಾರಣೆ ನಡೆಯಿತು. ಪೋಕ್ಸೋ ಕೇಸ್‌ನಲ್ಲಿ ಯಡಿಯೂರಪ್ಪ ಅವರಿಗೆ ಜಾಮೀನು ನೀಡಲು ಎಜಿ ಶಶಿಕಿರಣ್ ಶೆಟ್ಟಿ ವಿರೋಧಿಸಿದರು.
ನಾವು ಎರಡು ಬಾರಿ ನೊಟೀಸ್ ಕೊಟ್ಟಿದ್ದೇವೆ. ಆದ್ರೂ ಆರೋಪಿ ವಿಚಾರಣೆಗೆ ಬಂದಿಲ್ಲ. ನಾವು ಆರೋಪಿಯ ವಾಯ್ಸ್ ಸ್ಯಾಂಪಲ್ ಪಡೆದು ವರದಿ ಪಡೆದಿದ್ದೇವೆ. ವಿಡಿಯೋ ಸಾಕ್ಷಿಯ ಎಫ್ಎಸ್ಎಲ್ ವರದಿ ಸಹ ಪಡೆದಿದ್ದೇವೆ. ವಿಚಾರಣೆಗೆ ಹಾಜರಾಗಲು ನಾವು ನೊಟೀಸ್ ಕೊಟ್ಟ ಬಳಿಕ ಆರೋಪಿ ಡೆಲ್ಲಿಗೆ ಟಿಕೆಟ್ ಬುಕ್ ಮಾಡಿದ್ದಾರೆ ಎಂದು ಹೇಳಿದರು.
ಈ ನಡುವೆ ಸಿಐಡಿ ಎಸ್‌ಪಿಪಿ ಜಗದೀಶ್ ಅವರು ಪ್ರಕರಣದಲ್ಲಿ ಆರೋಪಿ ಕರೆಯಿಸಿ 2 ಲಕ್ಷ ರೂಪಾಯಿ ಹಣ ನೀಡಿ, ಆಕೆ ಬಳಿಯಿದ್ದ ವಿಡಿಯೋ ಡಿಲೀಟ್ ಮಾಡಲು ಹೇಳಿದ್ದಾರೆ. ಈ ಪ್ರಕರಣದಲ್ಲಿ ಆರೋಪಿ ಸಾಕ್ಷಿ ನಾಶಕ್ಕೆ ಪ್ರಯತ್ನಿಸಿದ್ದಾರೆ ಎಂದು ವಾದಿಸಿದ್ದರು.