Wednesday, February 19, 2025

ವಾಹನ ಸವಾರರಿಗೆ ಸಿಹಿ ಸುದ್ದಿ; ಪೆಟ್ರೋಲ್​, ಡೀಸೆಲ್ ಬೆಲೆ 2 ರೂಪಾಯಿ ಇಳಿಕೆ; ಇಂದಿನಿಂದ ಅನ್ವಯ

2024ರ ಲೋಕಸಭೆ ಚುನಾವಣೆ ಘೋಷಣೆಗೆ ದಿನಗಣನೆ ಶುರುವಾಗಿದೆ. ಈ ಹೊತ್ತಲ್ಲೇ ವಾಹನ ಸವಾರರಿಗೆ ಕೇಂದ್ರ ಸರ್ಕಾರ ಗುಡ್​ ನ್ಯೂಸ್​ ಕೊಟ್ಟಿದೆ. ಪೆಟ್ರೋಲ್, ಡಿಸೇಲ್ ದರ ಪ್ರತಿ ಲೀಟರ್​ಗೆ 2 ರೂ ಕಡಿಮೆ ಮಾಡಿದೆ.

ತೈಲ ದರ ಇಳಿಕೆಗೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇಂದು ಬೆಳಗ್ಗೆಯಿಂದಲೇ ಪರಿಷ್ಕೃತ ದರ ಜಾರಿಯಾಗಲಿದೆ. ಚುನಾವಣೆ ಸಮೀಪಿಸುದ್ದಂತೆ ಕೇಂದ್ರ ಸರ್ಕಾರ ತೈಲ ದರ ಇಳಿಕೆ ಮಾಡಿರುವುದು ಹಲವು ಆಯಾಮದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಬೆಲೆ ಇಳಿಕೆಯ ಬಗ್ಗೆ ಟ್ವೀಟ್​ ಮಾಡಿದ್ದು, ‘ತೈಲ ಮಾರುಕಟ್ಟೆ ದೇಶದಲ್ಲಿ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯನ್ನು ಪರಿಷ್ಕರಿಸುವುದಾಗಿ ತಿಳಿಸಿವೆ. ನೂತನ ಬೆಲೆ ಮಾರ್ಚ್​ 15, 2024 ಬೆಳಗ್ಗೆ 6 ಗಂಟೆಯಿಂದ ಜಾರಿಗೆ ಬರುತ್ತದೆ. ಬೆಲೆ ಕಡಿತವು ಗ್ರಾಹಕರ ವೆಚ್ಚವನ್ನು ಭರಿಸುತ್ತದೆ. ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುತ್ತದೆ. ಡಿಸೇಲ್ ಮತ್ತು ಪೆಟ್ರೋಲ್​​ನಲ್ಲಿ ಚಲಿಸುವ 58 ಲಕ್ಷ ಸರಕು ವಾಹನಗಳು, 6 ಕೋಟಿ ಕಾರುಗಳು, 27 ಕೋಟಿ ದ್ವೀಚಕ್ರ ವಾಹನಗಳಿವೆ’ ಎಂದು ಹೇಳಿದೆ.

Related Articles

Latest Articles