Friday, June 27, 2025

ಪ್ಯಾರಿಸ್ ಪ್ಯಾರಾ ಒಲಿಂಪಿಕ್: ಭಾರತಕ್ಕೆ ಮತ್ತೆರಡು ಚಿನ್ನ: ಒಂದೇ ಇವೆಂಟ್‌ನಲ್ಲಿ ಎರಡು ಪದಕ – ಪದಕಗಳ ಸಂಖ್ಯೆ 24 ಕ್ಕೆ ಏರಿಕೆ

ಪ್ಯಾರಿಸ್​ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತೀಯರ ಪದಕ ಬೇಟೆ ಮುಂದುವರೆದಿದೆ. ಸೆಪ್ಟೆಂಬರ್ 4 ರಂದು ಭಾರತೀಯ ಕ್ರೀಡಾಪಟುಗಳು 2 ಚಿನ್ನ ಹಾಗೂ 2 ಬೆಳ್ಳಿ ಪದಕಗಳನ್ನು ಗೆಲ್ಲುವ ಮೂಲಕ ಪದಕಗಳ ಸಂಖ್ಯೆಯನ್ನು 24 ಕ್ಕೇರಿಸಿದ್ದಾರೆ. ಆ ಮೂಲಕ ಪ್ಯಾರಾ ಒಲಿಂಪಿಕ್‌ನಲ್ಲಿ ಹಿಂದೆಂದಿಗಿಂತಲೂ ಅಮೋಘ ಸಾಧನೆ ತೋರಿದ್ದಾರೆ.

ಪುರುಷರ ಆರ್ಚರಿ ಸ್ಪರ್ಧೆಯ ವೈಯಕ್ತಿಕ ರಿಕರ್ವ್ ಓಪನ್ ಫೈನಲ್‌ನಲ್ಲಿ ಹರ್ವಿಂದರ್ ಸಿಂಗ್ ಚಿನ್ನದ ಪದಕ ಗೆದ್ದರೆ, ಕ್ಲಬ್ ಥ್ರೋನಲ್ಲಿ ಧರಂಬೀರ್ ನೈನ್ ಚಿನ್ನ, ಪ್ರಣವ್ ಸೂರ್ಮಾ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇದಕ್ಕಿಂತಲೂ ಮುಂಚೆ, ಶಾಟ್‌ಪುಟ್‌ನಲ್ಲಿ ಸಚಿನ್ ಖಿಲಾರಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಈ ಮೂಲಕ ಭಾರತವು ಒಟ್ಟು 5 ಚಿನ್ನದ ಪದಕ, 9 ಬೆಳ್ಳಿ ಪದಕ ಹಾಗೂ 10 ಕಂಚಿನ ಪದಕಗಳೊಂದಿಗೆ ಒಟ್ಟು 24 ಮೆಡಲ್​ಗಳನ್ನು ಗೆದ್ದಿದೆ. ಇನ್ನು ಭಾನುವಾರದವರೆಗೆ ಕ್ರೀಡಾಕೂಟ ಮುಂದುವರೆಯಲಿದ್ದು, ಹೀಗಾಗಿ ಭಾರತದ ಒಟ್ಟು ಪದಕಗಳ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದೆ.

ಸಂ.ಕ್ರೀಡಾಪಟುಕ್ರೀಡೆಈವೆಂಟ್ಪದಕ
1ಅವನಿ ಲೇಖನಾಶೂಟಿಂಗ್ಮಹಿಳೆಯರ 10ಮೀ ಏರ್ ರೈಫಲ್ ಸ್ಟ್ಯಾಂಡಿಂಗ್ SH1🥇ಚಿನ್ನ
2ಮೋನಾ ಅಗರ್ವಾಲ್ಶೂಟಿಂಗ್ಮಹಿಳೆಯರ 10ಮೀ ಏರ್ ರೈಫಲ್ ಸ್ಟ್ಯಾಂಡಿಂಗ್ SH1🥉 ಕಂಚು
3ಪ್ರೀತಿ ಪಾಲ್ಅಥ್ಲೆಟಿಕ್ಸ್ಮಹಿಳೆಯರ 100ಮೀ ಟಿ35🥉 ಕಂಚು
4ಮನೀಶ್ ನರ್ವಾಲ್ಶೂಟಿಂಗ್ಪುರುಷರ 10 ಮೀ ಏರ್ ಪಿಸ್ತೂಲ್ SH1🥈 ಬೆಳ್ಳಿ
5ರುಬಿನಾ ಫ್ರಾನ್ಸಿಸ್ಶೂಟಿಂಗ್ಮಹಿಳೆಯರ 10ಮೀ ಏರ್ ಪಿಸ್ತೂಲ್ SH1🥉 ಕಂಚು
6ಪ್ರೀತಿ ಪಾಲ್ಅಥ್ಲೆಟಿಕ್ಸ್ಮಹಿಳೆಯರ 200ಮೀ ಟಿ35🥉 ಕಂಚು
7ನಿಶಾದ್ ಕುಮಾರ್ಅಥ್ಲೆಟಿಕ್ಸ್ಪುರುಷರ ಎತ್ತರ ಜಿಗಿತ T47🥈 ಬೆಳ್ಳಿ
8ಯೋಗೇಶ್ ಕಥುನಿಯಾಅಥ್ಲೆಟಿಕ್ಸ್ಪುರುಷರ ಡಿಸ್ಕಸ್ ಥ್ರೋ F56🥈 ಬೆಳ್ಳಿ
9ನಿತೇಶ್ ಕುಮಾರ್ಬ್ಯಾಡ್ಮಿಂಟನ್ಪುರುಷರ ಸಿಂಗಲ್ಸ್ SL3🥇 ಚಿನ್ನ
10ತುಳಸಿಮತಿ ಮುರುಗೇಶನ್ಬ್ಯಾಡ್ಮಿಂಟನ್ಮಹಿಳೆಯರ ಸಿಂಗಲ್ಸ್ SU5🥈 ಬೆಳ್ಳಿ
11ಮನಿಷಾ ರಾಮದಾಸ್ಬ್ಯಾಡ್ಮಿಂಟನ್ಮಹಿಳೆಯರ ಸಿಂಗಲ್ಸ್ SU5🥉 ಕಂಚು
12ಸುಹಾಸ್ ಯತಿರಾಜ್ಬ್ಯಾಡ್ಮಿಂಟನ್ಪುರುಷರ ಸಿಂಗಲ್ಸ್ SL4🥈 ಬೆಳ್ಳಿ
13ರಾಕೇಶ್ ಕುಮಾರ್ / ಶೀತಲ್ ದೇವಿಬಿಲ್ಲುಗಾರಿಕೆಮಿಶ್ರ ತಂಡ🥉 ಕಂಚು
14ಸುಮಿತ್ ಆಂಟಿಲ್ಅಥ್ಲೆಟಿಕ್ಸ್ಜಾವೆಲಿನ್ ಎಸೆತ F64🥇 ಚಿನ್ನ
15ನಿತ್ಯ ಶ್ರೀ ಶಿವನ್ಬ್ಯಾಡ್ಮಿಂಟನ್ಮಹಿಳೆಯರ ಸಿಂಗಲ್ಸ್ SH6🥉 ಕಂಚು
16ದೀಪ್ತಿ ಜೀವನಜಿಅಥ್ಲೆಟಿಕ್ಸ್ಮಹಿಳೆಯರ 400 ಮೀ ಟಿ20🥉 ಕಂಚು
17ಮರಿಯಪ್ಪನ್ ತಂಗವೇಲುಅಥ್ಲೆಟಿಕ್ಸ್ಪುರುಷರ ಎತ್ತರ ಜಿಗಿತ T63🥉 ಕಂಚು
18ಶರದ್ ಕುಮಾರ್ಅಥ್ಲೆಟಿಕ್ಸ್ಪುರುಷರ ಎತ್ತರ ಜಿಗಿತ T63🥈 ಬೆಳ್ಳಿ
19ಅಜೀತ್ ಸಿಂಗ್ಅಥ್ಲೆಟಿಕ್ಸ್ಪುರುಷರ ಜಾವೆಲಿನ್ ಎಸೆತ F46🥈 ಬೆಳ್ಳಿ
20ಸುಂದರ್ ಸಿಂಗ್ ಗುರ್ಜರ್ಅಥ್ಲೆಟಿಕ್ಸ್ಪುರುಷರ ಜಾವೆಲಿನ್ ಎಸೆತ F46🥉 ಕಂಚು
21ಸಚಿನ್ ಖಿಲಾರಿಅಥ್ಲೆಟಿಕ್ಸ್ಪುರುಷರ ಶಾಟ್ ಪುಟ್ F46🥈 ಬೆಳ್ಳಿ
22ಹರ್ವಿಂದರ್ ಸಿಂಗ್ಬಿಲ್ಲುಗಾರಿಕೆಪುರುಷರ ವೈಯಕ್ತಿಕ ರಿಕರ್ವ್ 🥇 ಚಿನ್ನ
23ಧರಂಬೀರ್ಅಥ್ಲೆಟಿಕ್ಸ್ಪುರುಷರ ಕ್ಲಬ್ ಥ್ರೋ F51🥇 ಚಿನ್ನ
24ಪರ್ಣವ್ ಸೂರ್ಮಾಅಥ್ಲೆಟಿಕ್ಸ್ಪುರುಷರ ಕ್ಲಬ್ ಥ್ರೋ F51🥈 ಬೆಳ್ಳಿ

Related Articles

Latest Articles