Tuesday, April 22, 2025

ವಿದೇಶಿ ಕರೆನ್ಸಿ‌ ಕಳ್ಳಸಾಗಣೆ: ಸಿಕ್ಕಿ ಬಿದ್ದಳು ಗಗನಸಖಿ

ಗಗನಸಖಿಯೊಬ್ಬಳು ವಿದೇಶಿ ಕರೆನ್ಸಿಯನ್ನು ಕಳ್ಳಸಾಗಣೆ ಮಾಡಿ ಸಿಕ್ಕಿಬಿದ್ ಘಟನೆ ಪಾಕಿಸ್ತಾನದಿಂದ ವರದಿಯಾಗಿದೆ.
ಲಾಹೋರ್‌ನ ಅಲ್ಲಮಾ ಇಕ್ಬಾಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪಾಕಿಸ್ತಾನ್ ಇಂಟರ್ನ್ಯಾಷನಲ್ ಏರ್‌ಲೈನ್ಸ್‌ನಲ್ಲಿ ಗಗನಸಖಿಯೊಬ್ಬಳು ವಿದೇಶಿ ಕರೆನ್ಸಿಯನ್ನು ಕಳ್ಳಸಾಗಣೆ ಮಾಡಿದ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾಳೆ
.

ಕಸ್ಟಮ್ಸ್ ಅಧಿಕಾರಿಗಳು, ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ ಮತ್ತು ಇಮಿಗ್ರೇಶನ್ ಆಥೋರಿಟಿಯು ಜಂಟಿ ಕಾರ್ಯಾಚರಣೆ ನಡೆಸಿ ಗಗನಸಖಿಯ ಕಾಲಿನಲ್ಲಿರುವ ಸಾಕ್ಸ್ ಅನ್ನು ಪರಿಶೀಲನೆ ನಡೆಸಿದರು.

ಈ ವೇಳೆ ಆಕೆಯ ಕಾಲಿನ ಸಾಕ್ಸ್ ನಲ್ಲಿ ಹಲವು ವಿದೇಶಿ ಕರೆನ್ಸಿ ಪತ್ತೆಯಾಗಿದ್ದು, ಆಕೆಯನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಇದೀಗ ಈ ಘಟನೆಗೆ ಸಂಬಂಧಪಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಗಗನಸಖಿಯ ಬ್ಯಾಗ್ ನಲ್ಲಿದ್ದ 37,318 ಡಾಲರ್ ಮತ್ತು 40,000 ಸೌದಿ ರಿಯಾಲ್‌ಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಗಗನಸಖಿ ಜೆಡ್ಡಾಗೆ ತೆರಳಲು ಪಿಐಎ ವಿಮಾನವನ್ನು ಹತ್ತಬೇಕಾಗಿತ್ತು. ಆಗ ಅಧಿಕಾರಿಗಳು ಆಕೆಯ ಮೇಲೆ ಅನುಮಾನಗೊಂಡು ಅವಳನ್ನು ಪರಿಶೀಲನೆಗೊಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇನ್ನು ಗಗನಸಖಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮಕ್ಕಾಗಿ ತನಿಖಾ ತಂಡಕ್ಕೆ ಹಸ್ತಾಂತರಿಸಲಾಗಿದೆ.

Related Articles

Latest Articles