Saturday, May 24, 2025

ಮತ್ತೊಂದು ಪದಕದತ್ತ ಮನು ಭಾಕರ್‍ ಕಣ್ಣು..! ಹ್ಯಾಟ್ರಿಕ್ ಪದಕ ಗೆಲ್ಲುಲಿ ಎಂದು ಹಾರೈಸೋಣ

ಭಾರತದ ಮಹಿಳಾ ಶೂಟರ್ ಮನು ಭಾಕರ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ದಾಖಲೆ ನಿರ್ಮಿಸಿದ್ದಾರೆ . ಮನು ಭಾಕರ್ ಒಂದೇ ಒಲಿಂಪಿಕ್ಸ್‌ ಆವೃತ್ತಿಯಲ್ಲಿ 2 ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮನು ಈ ಹಿಂದೆ 10 ಮೀಟರ್ ಏರ್ ಪಿಸ್ತೂಲ್ ಮಹಿಳೆಯರ ವಿಭಾಗದಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದಿದ್ದರು. ಈಗ ಅವರು ಸರಬ್ಜೋತ್ ಸಿಂಗ್ ಅವರೊಂದಿಗೆ ಟೀಮ್ ಈವೆಂಟ್‌ನಲ್ಲಿ ಮತ್ತೊಂದು ಕಂಚಿನ ಪದಕ ಗೆದ್ದಿದ್ದಾರೆ.

ಈ ಹಿಂದೆ ಕುಸ್ತಿಪಟು ಸುಶೀಲ್ ಕುಮಾರ್ ಹಾಗೂ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದ ಸಾಧನೆ ಮಾಡಿದ್ದರು. ಆದರೆ ಅವರು ವಿವಿಧ ಆವೃತ್ತಿಗಳಲ್ಲಿ ಈ ಪದಕ ಗೆದ್ದಿದ್ದರು. ಸುಶೀಲ್ ಕುಮಾರ್ 2008ರಲ್ಲಿ ಕಂಚಿನ ಪದಕ ಹಾಗೂ 2012ರಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಹಾಗೆಯೇ ಪಿವಿ ಸಿಂಧು 2016ರಲ್ಲಿ ಬೆಳ್ಳಿ ಹಾಗೂ 2021ರಲ್ಲಿ ಕಂಚಿನ ಪದಕ ಗೆದ್ದಿದ್ದರು.

ಇನ್ನು ಮನು ಭಾಕರ್ ಪ್ಯಾರಿಸ್ ಒಲಿಂಪಿಕ್ಸ್​ಗೆ 3 ಸ್ಪರ್ಧೆಗಳಲ್ಲಿ ಅರ್ಹತೆ ಪಡೆದಿದ್ದರು. ಈಗ ಅವರು ಆಗಸ್ಟ್ 2 ರಂದು 25 ಮೀಟರ್ ಏರ್ ಪಿಸ್ತೂಲ್ ಶೂಟಿಂಗ್ ಈವೆಂಟ್‌ನಲ್ಲಿ ಆಡಲಿದ್ದಾರೆ. ಈ ಪಂದ್ಯ ಆಗಸ್ಟ್ 2 ರಂದು ಮಧ್ಯಾಹ್ನ 12:30 ಕ್ಕೆ ನಡೆಯಲಿದೆ. ಮನು ಈ ಸ್ಪರ್ಧೆಯಲ್ಲಿ ಪದಕ ಗೆಲ್ಲುವ ಪ್ರಬಲ ಸ್ಪರ್ಧಿ ಎಂದು ಪರಿಗಣಿಸಲಾಗಿದೆ. ಒಂದು ವೇಳೆ ಮನು ಪದಕ ಗೆಲ್ಲುವಲ್ಲಿ ಯಶಸ್ವಿಯಾದರೆ, ಇದು ಹೊಸ ದಾಖಲೆಯಾಗಲಿದೆ.

Manu Bhaker had qualified for the Paris Olympics in 3 events. She will now play in the 25m air pistol shooting event on August 2. The match will be played on August 2 at 12:30 PM. Manu is considered a strong contender to win a medal in this event. If Manu succeeds in winning a medal, it will be a new record.

Related Articles

Latest Articles