Sunday, May 18, 2025

ನೀರಜ್ ಚೋಪ್ರಾ ಮತ್ತೆ ಪರಾಕ್ರಮ – ಭರ್ಜರಿ ಚಿನ್ನದ ಬೇಟೆ..! ತನ್ನದೇ ದಾಖಲೆ ಮುರಿದ ಬಂಗಾರದ ಯುವಕ

ಎರಡು ಬಾರಿ ಒಲಿಂಪಿಕ್ ಪದಕ ಗೆದ್ದ ಜಾವೆಲಿನ್ ಆಟಗಾರ ನೀರಜ್ ಚೋಪ್ರಾ ಮತ್ತೊಮ್ಮೆ ಸಾಧನೆ ಮಾಡಿದ್ದಾರೆ. 2025ರ ವರ್ಷದಲ್ಲಿ ಗೆಲುವಿನ ಮೂಲಕ ಶುಭಾರಂಭ ಮಾಡಿದ್ದಾರೆ.

ದಕ್ಷಿಣ ಆಫ್ರಿಕಾದ ಪೊಚೆಫ್‌ಸ್ಟ್ರೂಮ್‌ನಲ್ಲಿ ನಡೆದ ಪೊಚ್ ಇನ್ವಿಟೇಷನಲ್ ಟ್ರ್ಯಾಕ್ ಈವೆಂಟ್ (Potch Invitational Track event)ನ World Athletics Continental Tour Challengerನಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.

ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಸೇರಿ 6 ಸ್ಪರ್ಧಿಗಳ ನಡುವೆ ಪೈಪೋಟಿ ಇತ್ತು. ಇದರಲ್ಲಿ ನೀರಜ್ ಚೋಪ್ರಾಗೆ ಸೌತ್ ಆಫ್ರಿಕಾದ 25 ವರ್ಷದ ಯುವ ಜಾವೆಲಿನ್ ಎಸೆತಗಾರ ಡೌ ಸ್ಮಿತ್ ಕಠಿಣ ಪೈಪೋಟಿ ಕೊಟ್ಟರು. ಆದರೆ ಕೊನೆಯಲ್ಲಿ ನೀರಜ್ ಚೋಪ್ರಾ ಸನಿಹಕ್ಕೂ, ಸ್ಮಿತ್​ ಬರಲಾಗಲಿಲ್ಲ. ಏಕೆಂದರೆ ನೀರಜ್ ಚೋಪ್ರಾ ಎಸೆದಿರುವುದು ಈ ಹಿಂದಿಗಿಂತಲೂ ಅಧಿಕವಾದ ದೂರವಾಗಿದೆ.

ನೀರಜ್ ಚೋಪ್ರಾ ಅವರು ಸ್ಪರ್ಧೆಯಲ್ಲಿ ಒಟ್ಟು 84.52 ಮೀಟರ್​ ದೂರ ಈಟಿ ಎಸೆಯುವ ಮೂಲಕ‌ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು.

Related Articles

Latest Articles