ಭೂಮಿಯ ಕಡೆಗೆ ಕ್ಷುದ್ರಗ್ರಹವೊಂದು ಧಾವಿಸುತ್ತಿದೆ. 2014 TN17 ಹೆಸರಿನ ದೈತ್ಯ ಕ್ಷುದ್ರಗ್ರಹವು ಭೂಮಿಯತ್ತ ವೇಗವಾಗಿ ನುಗ್ಗುತ್ತಿರುವ ಬಗ್ಗೆ ನಾಸಾ ಎಚ್ಚರಿಕೆ ಕೊಟ್ಟಿದೆ. ಕ್ಷುದ್ರಗ್ರಹ ಗಂಟೆಗೆ 77282 ಕಿ.ಮೀ ವೇಗದಲ್ಲಿ ಭೂಮಿಯತ್ತ ಬರುತ್ತಿದೆ. ಈ ಕ್ಷುದ್ರಗ್ರಹವು ಮುಂದಿನ ದಿನಗಳಲ್ಲಿ ನಮ್ಮ ಗ್ರಹದ ಬಳಿ ಹಾದು ಹೋಗಲಿದೆ. ಈ ಕ್ಷುದ್ರಗ್ರಹವು ಭೂಮಿಯಿಂದ ಸುರಕ್ಷಿತ ದೂರವನ್ನು ಕಾಯ್ದುಕೊಳ್ಳುತ್ತದೆಯಾದರೂ, ನಾಸಾ ಇದನ್ನು ಸಂಭಾವ್ಯ ಅಪಾಯಕಾರಿ ಕ್ಷುದ್ರಗ್ರಹ (PHA) ಎಂದು ತಿಳಿಸಿದ್ದಾಗಿ ವರದಿಯಾಗಿದೆ.
ಈ ಕ್ಷುದ್ರಗ್ರಹದ ಸುಮಾರು 540 ಅಡಿಗಳಷ್ಟು ಅಗಲವಾಗಿದೆ. ತುಂಬಾ ಅಪಾಯಕಾರಿಯಾಗಿರುವ ಹಿನ್ನೆಲೆ ಈ ಕ್ಷುದ್ರಗ್ರಹವನ್ನು ವಿಜ್ಞಾನಿಗಳು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
ನಾಸಾ ವಿಜ್ಞಾನಿಗಳ ಪ್ರಕಾರ, ಅದರ ಗಾತ್ರ ಮತ್ತು ವೇಗವನ್ನು ಗಮನಿಸಿದರೆ ಈ ಶಿಲೆಯು ಗಂಟೆಗೆ 77,282 ಕಿ.ಮೀ ವೇಗದಲ್ಲಿ ಭೂಮಿಯ ಕಡೆಗೆ ಚಲಿಸುತ್ತಿದೆ. ಇದರ ದೊಡ್ಡ ಗಾತ್ರ ಮತ್ತು ಭೂಮಿಗೆ ಸಾಮೀಪ್ಯ ಇರುವುದರಿಂದ, ಇದನ್ನು ಭವಿಷ್ಯದ ಸಂಭಾವ್ಯ ಅಪಾಯಕಾರಿ ಎಂದು ಪರಿಗಣಿಸಲಾಗಿದೆ.
ಭೂಮಿಯ ಸಮೀಪ ಹಾದುಹೋಗುವ ವಸ್ತುಗಳನ್ನು ನಾಸಾ ಕೇಂದ್ರವು ಸೂಕ್ಷ್ಮವಾಗಿ ಅಧ್ಯಯನ, ನಿರಂತರ ನಿಗಾ ಇಡುವ ಕೆಲಸ ಮಾಡುತ್ತಿದೆ. ಈ ಬಾಹ್ಯಾಕಾಶಿಲೆಯನ್ನು ಟ್ರ್ಯಾಕ್ ಮಾಡಲಾಗುತ್ತಿದೆ. ಇದು ಮಾ. 26 ರಂದು ಭೂಮಿಗೆ ಹತ್ತಿರವಾಗಿ ಹಾದು ಹೋಗಲಿದೆ.
ಪ್ರಸ್ತುತ ಯಾವುದೇ ಕ್ಷುದ್ರಗ್ರಹ ಭೂಮಿಗೆ ಡಿಕ್ಕಿ ಹೊಡೆಯುವ ಅಪಾಯವಿಲ್ಲ, ಆದರೆ ಭವಿಷ್ಯದಲ್ಲಿ ಕಕ್ಷೆಯಲ್ಲಾಗುವ ಸಣ್ಣ ಬದಲಾವಣೆ ಕೂಡ ಅಪಾಯವನ್ನುಂಟುಮಾಡಬಹುದು. ಈ ಕ್ಷುದ್ರಗ್ರಹ ಭೂಮಿಗೆ ಡಿಕ್ಕಿ ಹೊಡೆದಿದ್ದರೆ, ಅದರ ಪರಿಣಾಮ ಸುನಾಮಿಗಳು, ಭೂಕಂಪಗಳು ಮತ್ತು ವಾತಾವರಣದ ಬದಲಾವಣೆಗಳಂತ ಘಟನೆಗಳು ನಡೆಯಬಹುದು.
ಈ ಕಾರಣಕ್ಕಾಗಿ, ವಿಜ್ಞಾನಿಗಳು ಈ ಆಕಾಶಕಾಯಗಳ ಬಗ್ಗೆ ನಿರಂತರವಾಗಿ ಸಂಶೋಧನೆ ನಡೆಸುತ್ತಿದ್ದಾರೆ, ಇದರಿಂದಾಗಿ ಯಾವುದೇ ಸಂಭವನೀಯ ಅಪಾಯವನ್ನು ಸಮಯಕ್ಕೆ ಸರಿಯಾಗಿ ನಿಭಾಯಿಸಬಹುದು ಮುಖ್ಯವಾಗಿದೆ.