Monday, December 9, 2024

ವಿಡಿಯೋ ಬೇಕಾ DM ಮಾಡಿ; ಪ್ರಜ್ವಲ್​ರದ್ದು ಎನ್ನಲಾದ ವಿಡಿಯೋ ಕಳಿಸಿ ಕಿಡಿಗೇಡಿಗಳಿಂದ ಹಣಕ್ಕೆ ಡಿಮ್ಯಾಂಡ್!

ಪ್ರಜ್ವಲ್ ರೇವಣ್ಣ ಅತ್ಯಾಚಾರ ಆರೋಪ ಪ್ರಕರಣ ದಿನಕ್ಕೊಂದು ಟ್ವಿಸ್ಟ್​ ಪಡೆದುಕೊಳ್ಳುತ್ತಿದೆ. ಒಂದು ಕಡೆ ಎಸ್​ಐಟಿ ಅಧಿಕಾರಿಗಳು ಲೈಂಗಿಕ ದೌರ್ಜನ್ಯ ಆರೋಪಿ ಮಾಜಿ ಸಂಸದ ಪ್ರಜ್ವಲ್​ ರೇವಣ್ಣರನ್ನ ತೀವ್ರ ವಿಚಾರಣೆ, ವೈದ್ಯಕೀಯ ಪರೀಕ್ಷೆ, ಸ್ಥಳ ಮಹಜರು ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಪೆನ್​ಡ್ರೈವ್​ ಸದ್ದು ಜೋರಾಗ್ತಾಯಿದ್ದಂತೆ​, ಪ್ರಜ್ವಲ್​ ನಾಪತ್ತೆ ಆಗಿದ್ರು. ಇದೀಗ ಮತ್ತೆ ಭಾರತಕ್ಕೆ ಮರಳಿದ್ದು ಎಸ್​ಐಟಿ ಕೈಯಲ್ಲಿ ಬಂಧಿಯಾಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪ್ರಜ್ವಲ್ ರೇವಣ್ಣ ವೀಡಿಯೋ ಬೇಕಾ ಡಿಎಂ (ಡೈರೆಕ್ಟ್ ಮೆಜೇಜ್) ಮಾಡಿ ಎಂಬ ಹೊಸ ಹಸಿಬಿಸಿ ದಂಧೆ ಮುನ್ನೆಲೆಗೆ ಬಂದಿದೆ. ಇದು ಈಗಿನಿಂದ ಅಲ್ಲ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಈ ದಂಧೆ ಆರಂಭವಾಗಿದ್ದಾಗಿ ತಿಳಿದುಬಂದಿದೆ.

ಕಿಡಿಗೇಡಿಗಳು ಪ್ರಜ್ವಲ್​ ರೇವಣ್ಣ ಹೆಸರನ್ನ ಬಳಸಿಕೊಂಡು ದಂಧೆಗಿಳಿದಿದ್ದಾರೆ. ಸಂತ್ರಸ್ತೆಯರ ಮಾನಹಾನಿಯಾಗಬಾರದು ಎಂಬ ಕಾರಣಕ್ಕೆ ಎಸ್​ಐಟಿ ಅಶ್ಲೀಲ ವಿಡಿಯೋ ಹಂಚಿಕೆ ಮಾಡದಂತೆ ಆದೇಶ ಹೊರಡಿಸಿದೆ. ಅಷ್ಟೇ ಅಲ್ಲ, ಹಂಚಿಕೆ ಮಾಡಿದವರನ್ನ ಅರೆಸ್ಟ್​ ಕೂಡ ಮಾಡಿದೆ. ಆದ್ರೆ, ಇಷ್ಟಾದ್ರೂ ಬುದ್ಧಿ ಕಲಿಯದ ಕೆಲವರು ಇದನ್ನೇ ಹಣ ಗಳಿಸುವ ದಂಧೆಯಾಗಿ ಮಾಡಿಕೊಂಡಿದ್ದಾರೆ.

ಲೈಕ್ಸ್​ ಹಾಗೂ ವೀವ್ಸ್​ ಹಣಕ್ಕಾಗಿ ಪ್ರಜ್ವಲ್​ ರೇವಣ್ಣರದ್ದು ಎನ್ನಲಾದ ವಿಡೀಯೋ ಮಾರಾಟ ಮಾಡ್ತಿದ್ದಾರೆ. ಇದಕ್ಕಾಗಿ ಸೋಶಿಯಲ್​ ಮೀಡಿಯಾವನ್ನು ಬಳಸಿಕೊಳ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಂತ್ರಸ್ತೆಯರ ಫೊಟೋ ಬಳಸಿ, ತೆಲುಗು ನಾಯಕ ನಟಿಯರ ಫೋಟೋ ಬಳಸಿ ವಿಡಿಯೋ ಇದೆ. ನಿಮಗೆ ಆ ವಿಡಿಯೋ ಬೇಕಾದರೇ ಡಿಎಂ ಮಾಡಿ ಅಂತ ನೀಚ ಕೃತ್ಯ ನಡೆಸ್ತಿದ್ದಾರೆ.

ವಿಪರ್ಯಾಸ ಅಂದ್ರೆ, ಕಿಡಿಗೇಡಿಗಳು ವಿಡಿಯೋಗಳನ್ನ ಹಣಕ್ಕಾಗಿ, ಲೈಕ್​ಗಾಗಿ ಬಳಕೆ ಮಾಡ್ತಾಯಿದ್ರೆ, ಇತ್ತ, ಪ್ರಜ್ವಲ್​ರದ್ದು ಎನ್ನಲಾದ ವಿಡಿಯೋ ಪಡೆಯಲು ಕಾಮುಕರು ಕೂಡ ಮುಗಿಬಿದ್ದಾರೆ. ಸದ್ಯ, ಈ ವಿಚಾರವನ್ನ ಗಂಭೀರವಾಗಿ ಪರಿಗಣಿಸಿ ಇಂತವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕಿದೆ.

Related Articles

Latest Articles