Wednesday, February 19, 2025

ಲೋಕಸಭೆಯಲ್ಲಿ ಪ್ರಧಾನಿ ಮೋದಿಯಿಂದ ಕೊನೆ ಭಾಷಣ; ’ಎಷ್ಟು ವರ್ಷವಾದ್ರೂ ಕಾಂಗ್ರೆಸ್​​ ಅಧಿಕಾರಕ್ಕೆ ಬರಲ್ಲ’ ಎಂದ ನಮೋ

ಇಂದು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ತೀವ್ರ ಕೋಲಾಹಲ ಮಧ್ಯೆಯೇ ಪ್ರಧಾನಿ ಮೋದಿ ತನ್ನ ಸರ್ಕಾರದ ಕೊನೆಯ ಭಾಷಣ ಮಾಡಿದ್ದಾರೆ. ಕೈ‌ ನಾಯಕರ ವಿರುದ್ಧ ಸರಣಿ ವಾಗ್ವಾದ ನಡೆಸಿದ ಮೋದಿ ನಿಮಗೆ ಒಳ್ಳೆಯ ವಿಪಕ್ಷವಾಗುವ ಅವಕಾಶ ಸಿಕ್ಕಿತ್ತು. ಆದರೆ, 10 ವರ್ಷ ಕಳೆದರೂ ನೀವು ಏನು ಮಾಡಲಿಲ್ಲ. ಬೇರೆಯವರಿಗೂ ಕಾಂಗ್ರೆಸ್ ನಾಯಕರಾಗಲೂ ಬಿಡಲಿಲ್ಲ, ಯುವಕರಿಗೂ ಅವಕಾಶ ನೀಡಲಿಲ್ಲ ಎಂದು ಲೇವಡಿ ಮಾಡಿದ್ದಾರೆ.

ದೇಶಕ್ಕೆ ಒಳ್ಳೆ ವಿರೋಧ ಪಕ್ಷ ಬೇಕು. ಕಾಂಗ್ರೆಸ್​​ನಲ್ಲಿ ಕುಟುಂಬ ರಾಜಕಾರಣ ವಿಪರೀತವಾಗಿದೆ. ಭಾರತವನ್ನು ಇನ್ನೂ ಎಷ್ಟು ವಿಭಜನೆ ಮಾಡುತ್ತೀರಿ. ನೀವು ಹೀಗೆ ಮಾಡಿದ್ರೆ ಮುಂದೆ ಕೂಡ ವಿರೋಧ ಪಕ್ಷಗಳ ಸ್ಥಾನದಲ್ಲೇ ಇರುತ್ತೀರಿ ಎಂದರು.

ಒಂದೇ ಕೆಲಸವನ್ನು ಎಷ್ಟು ಸಲ ಮಾಡುತ್ತೀರಿ. ಕಾಂಗ್ರೆಸ್​​ ತನ್ನ ಅಂಗಡಿಯನ್ನೇ ಮುಚ್ಚಿದೆ. ಇದಕ್ಕೆ ಕಾರಣ ರಾಹುಲ್​ ಗಾಂಧಿಯವರು. ಕುಟುಂಬ ರಾಜಕಾರಣ ಎಲ್ಲಿಯವರೆಗೂ ಇರುತ್ತೋ ಅಲ್ಲಿವರೆಗೂ ಕಾಂಗ್ರೆಸ್​​ ಅಧಿಕಾರಕ್ಕೆ ಬರಲ್ಲ. ಗುಲಾಂ ನಬಿ ಆಜಾದ್ ಅವರನ್ನು ಪಕ್ಷದಿಂದ ಹೊರಗೆ ಹಾಕಿದ್ದು ನನಗೆ ನೆನಪಿದೆ ಎಂದರು.

ಆರ್ಟಿಕಲ್ 370 ರದ್ದು, ಜಿಎಸ್‌ಟಿ ಜಾರಿ, ವಂದೇ ಭಾರತ್ ರೈಲು, ಆಯುಷ್ಮಾನ್ ಭಾರತ, ರಾಮ ಮಂದಿರ ನಿರ್ಮಾಣ ಸೇರಿ ಮಹತ್ವದ ವಿಚಾರಗಳ ಕುರಿತು ಪ್ರಸ್ತಾಪ ಮಾಡಿದರು.

ನಮ್ಮ ಸರ್ಕಾರದ 3ನೇ ಅವಧಿಯಲ್ಲಿ ಭಾರತವು ವಿಶ್ವದಲ್ಲೇ ಮೂರನೇ ಅತಿ ದೊಡ್ಡ ಆರ್ಥಿಕತೆಯ ರಾಷ್ಟ್ರ ಆಗಲಿದೆ. ಕಳೆದ 10 ವರ್ಷಗಳ ಕಾರ್ಯಾವಧಿಯಲ್ಲಿ ಭಾರತ ವಿಶ್ವದ 5ನೇ ಅತಿ ದೊಡ್ಡ ಆರ್ಥಿಕತೆ ರಾಷ್ಟ್ರವಾಗಿದೆ. ನಾವು ಅಧಿಕಾರಕ್ಕೆ ಬರೋ ಮುನ್ನ ಭಾರತ ವಿಶ್ವದಲ್ಲೇ 11ನೇ ಸ್ಥಾನದಲ್ಲಿ ಇತ್ತು ಎಂದರು.

ಭಾರತದ ಪ್ರಗತಿಯನ್ನು ಜಿ20 ಸದಸ್ಯ ರಾಷ್ಟ್ರಗಳು ಕೊಂಡಾಡುತ್ತಿವೆ. ದೇಶ ಇಷ್ಟು ದೊಡ್ಡ ಮಟ್ಟದ ಅಭಿವೃದ್ದಿ ಸಾಧಿಸಿದೆ. ಈ ಕಲ್ಪನೆ ಕೂಡ ಕಾಂಗ್ರೆಸ್‌ಗೆ ಇರಲಿಲ್ಲ. ಇನ್ನೂ 100 ವರ್ಷ ಆಗಿದ್ರೂ ಕಾಂಗ್ರೆಸ್​​ ಇಷ್ಟು ಅಭಿವೃದ್ದಿ ಮಾಡುತ್ತಿರಲಿಲ್ಲ ಎಂದು ಮೋದಿ ಹೇಳಿದರು‌.

Related Articles

Latest Articles