ಬೆಂಗಳೂರು: ಫಿಟ್ನೆಸ್ ತರಬೇತುದಾರ ಹಾಗೂ ಖ್ಯಾತ ಸೈಕ್ಲಿಸ್ಟ್ ಆಗಿದ್ದ ಅನಿಲ್ ಕಡ್ಸೂರ್ ಅವರು ಹೃಯದಾಘಾತಕ್ಕೆ ಬಲಿಯಾಗಿದ್ದಾರೆ.
45 ವರ್ಷದ ಅವರು ಹೃದಯಾಘಾತದಿಂದ ಅಸ್ವಸ್ಥರಾದಾಗ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಅನಿಲ್ ಅವರು 1500ಕ್ಕೂ ಅಧಿಕ ದಿನಗಳಿಂದ ಪ್ರತಿದಿನ 100 ಕಿಲೋ ಮೀಟರ್ ಸೈಕ್ಲಿಂಗ್ ಮಾಡುತ್ತಿದ್ದರು. ದೇಹದಂಡನೆ ಮೂಲಕ ಆರೋಗ್ಯವನ್ನ ಕಾಪಾಡಿಕೊಂಡು ಬಂದಿದ್ದ ಅನಿಲ್ ಅವರಿಗೂ ಹೃದಯಾಘಾತವಾಗಿದೆ.