Sunday, October 13, 2024

ಮುಂಬೈ ಇಂಡಿಯನ್ಸ್‌ಗೆ ಮತ್ತೊಂದು ಆಘಾತ; ಸ್ಟಾರ್ ಬೌಲರ್ ಔಟ್

ಮುಂಬರುವ ಬಹು ನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆವೃತ್ತಿಗೆ ಮುನ್ನ ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡವು ಆಘಾತದ ಮೇಲೆ ಆಘಾತ ಎದುರಿಸುತ್ತಿದೆ.

2024ರ ಐಪಿಎಲ್ ಆರಂಭಕ್ಕೂ ಮುನ್ನ ಸ್ಟಾರ್ ಬೌಲರ್ ಜೇಸನ್ ಬೆಹ್ರೆಂಡಾರ್ಫ್ ( Jason Behrendorff) ಗಾಯಗೊಂಡು ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಅವರ ಬದಲಿಗೆ ಇಂಗ್ಲೆಂಡ್ ಬೌಲರ್ ಲ್ಯೂಕ್ ವುಡ್ ಅವರನ್ನು ಆಯ್ಕೆ ಮಾಡಿದೆ.

2024ರ ಐಪಿಎಲ್ ಹರಾಜಿಗೂ ಮುನ್ನ ಎಡಗೈ ವೇಗಿ ಜೇಸನ್ ಬೆಹ್ರೆನ್‌ಡಾರ್ಫ್ ಅವರನ್ನು ಉಳಿಸಿಕೊಳ್ಳಲಾಗಿತ್ತು. ಆದಾಗ್ಯೂ, ಶ್ರೀಮಂತ ಕ್ರಿಕೆಟ್ ಲೀಗ್‌ನ 17ನೇ ಆವೃತ್ತಿಗೆ ಆರಂಭಕ್ಕೆ ಕೆಲವೇ ದಿನಗಳಿಗೂ ಮುನ್ನ ಗಾಯಗೊಂಡು ಹೊರಗುಳಿದಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡವು ತಮ್ಮ ಯೋಜನೆಗಳನ್ನು ಬದಲಿಸಿದ್ದು, ಗಾಯದ ಕಾರಣದಿಂದ ಹೊರಗುಳಿದ ನಂತರ ಜೇಸನ್ ಬೆಹ್ರೆನ್‌ಡಾರ್ಫ್ ಅವರ ಬದಲಿಯಾಗಿ ಇಂಗ್ಲೆಂಡ್ ವೇಗಿ ಲ್ಯೂಕ್ ವುಡ್ ಅವರನ್ನು ಕರೆತಂದಿದೆ. ಲ್ಯೂಕ್ ವುಡ್ ಎಡಗೈ ವೇಗಿಯಾಗಿದ್ದು, ಇಂಗ್ಲೆಂಡ್ ತಂಡದ ಪರ ಐದು ಟಿ20 ಮತ್ತು ಎರಡು ಏಕದಿನ ಪಂದ್ಯಗಳನ್ನು ಆಡಿದ್ದಾರೆ.

Related Articles

Latest Articles