ಕಾಸರಗೋಡು: ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡಿಆರ್‌ಐ ಮತ್ತು ಕಸ್ಟಮ್ಸ್ ತಂಡ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಕಳ್ಳಸಾಗಾಟ ಮೂಲಕ ಸಾಗಿಸಲಾದ 1.47 ಕೋಟಿ ರೂ. ಮೌಲ್ಯದ ಚಿನ್ನವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಕಾಸರಗೋಡಿನ ಅಬ್ದುಲ್ ರಹ್ಮಾನ್ ಮತ್ತು ಕಲ್ಲಿಕೋಟೆಯ ರಫೀಕ್ ಎಂಬವರು ಅಕ್ರಮವಾಗಿ ಚಿನ್ನ ಸಾಗಾಟ ನಡೆಸುತ್ತಿದ್ದುದು ಪತ್ತೆಹಚ್ಚಿ ವಶಪಡಿಸಲಾಗಿದೆ. ಇವರಿಬ್ಬರು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ದುಬಾಯಿಯಿಂದ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದರು.
ಅವರನ್ನು ಡಿಆರ್‌ಐ ಮತ್ತು ಕಸ್ಟಮ್ಸ್ ತಂಡ ತಪಾಸಣೆಗೊಳಪಡಿಸಿದಾಗ, ಅಬ್ದುಲ್ ರಹ್ಮಾನ್‌ನಿಂದ 79 ಲಕ್ಷ ರೂ. ಮೌಲ್ಯದ 1176 ಗ್ರಾಂ ಚಿನ್ನ ಮತ್ತು ರಫೀಕ್‌ನಿಂದ 71ಲಕ್ಷ ರೂ. ಮೌಲ್ಯದ 1086 ಗ್ರಾಂ ಚಿನ್ನ ಪತ್ತೆಹಚ್ಚಲಾಗಿದೆ. ಬಳಿಕ ಅವರಿಬ್ಬರನ್ನು ಕಸ್ಟಮ್ಸ್ ತಂಡ ಬಂಧಿಸಿದೆ.