Monday, October 14, 2024

ಮುಂಜಾನೆ ಕಾಲ ಮತ್ತು ಅಮೃತ ಸೋಮೇಶ್ವರ ಬಗೆಗಿನ ಮುಕ್ತಕಗಳು – ಗುಣಾಜೆ ರಾಮಚಂದ್ರ ಭಟ್

ಬೆಳಗಾಗೆ ಬುವಿಯಲ್ಲಿ ಹಕ್ಕಿಗಳ ಗಾಯನವು
ಚೆಲುವಾದ ರಂಗದಲಿ ಕೇಳುತ್ತ ಪುಳಕ..
ಇಳೆಯಲ್ಲಿ ಉಲ್ಲಾಸ ಮುಂಜಾನೆ ವೇಳೆಯಲಿ
ಕಳೆ ತುಂಬಿ ನೇಸರನ -ರಾಮಚಂದ್ರ.

ಎಲೆಯಲ್ಲಿ ಹೂವಲ್ಲಿ ಜಲಬಿಂದು ಮುತ್ತುಗಳು
ಕಳೆಗಟ್ಟಿ ಕಾಣುತ್ತ ಕಂಗಳನು ತುಂಬಿ..
ಹಲವಾರು ಚಿತ್ತಾರ ಶೋಭಿಸಿವೆ ಸುತ್ತಲೂ
ಬೆಳೆ ಹಬ್ಬ ಆನಂದ-ರಾಮಚಂದ್ರ.

[ ನೇಸರ=ಸೂರ್ಯ,ಚಿತ್ತಾರ =ಚಿತ್ರ ]

ಅಮೃತರಿಗೆ ಮುಕ್ತಕ ನಮನ

ಕಾಯಕ್ಕೆ ಸಾವಿಹುದು ಜರೆ ಮುತ್ತಿ ಕ್ಷೀಣಿಸಲು
ಸಾಯದ್ದು ಸಾಧನೆಯು ಉಳಿಯುತ್ತ ಅಮರ
ನಾಯಕರು ಅಮೃತರೇ ಕಾವ್ಯಗಳ ಲೋಕಕ್ಕೆ
ಗಾಯನದಿ ಬಾಳುತ್ತ -ರಾಮಚಂದ್ರ.

ಕಡಲತಡಿ ವಾಸಿಸಿದ ಮೇರು ಸಾಧಕರಿವರು
ಬೆಡಗೆಲ್ಲ ತುಂಬಿರುವ ವೈವಿಧ್ಯ ಬರೆಹ
ಕಡಲಾಚೆಗೂ ಹಬ್ಬಿ ಕೀರುತಿಯ ಪದವೇರಿ
ಮುಡಿವಿಲ್ಲ ಅಮೃತರಿಗೆ -ರಾಮಚಂದ್ರ

[ ಜರೆ =ವೃದ್ಧಾಪ್ಯ, ಪದ= ಸ್ಥಾನ ; ಮುಡಿವು=ಕೊನೆ ]

ಬರಹ: ಗುಣಾಜೆ ರಾಮಚಂದ್ರ ಭಟ್

Related Articles

Latest Articles