ಪ್ರೇಮ ವೈಫಲ್ಯದ ಹಿನ್ನೆಲೆ ಕಿರಾತಕನೊಬ್ಬ ತರಗತಿ ಬಿಡುವಿನ ವೇಳೆ ಕ್ಲಾಸ್‌ಗೆ ನುಗ್ಗಿ ಯುವತಿಗೆ ಕತ್ತರಿಯಿಂದ ಇರಿದ ಘಟನೆ ಮೂಡಬಿದಿರೆಯಲ್ಲಿ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಈ ಘಟನೆ ನಡೆದಿದೆ. ತುಮಕೂರು ಮೂಲದ ಮಂಜುನಾಥ್ ಎಂಬಾತ ಆ.13ರಂದು ಕಾಲೇಜಿನಲ್ಲಿ ಓದುತ್ತಿದ್ದ ತುಮಕೂರು ಮೂಲದ ಯುವತಿಗೆ ಕತ್ತರಿಯಿಂದ ಇರಿದು ಸಾಯಿಸಲು ಯತ್ನಿಸಿದ್ದಾನೆ.
ಸದ್ಯ ತರಗತಿಯಲ್ಲಿದ್ದ ಸಹಪಾಠಿಗಳ ಸಹಾಯದಿಂದ ತಕ್ಷಣವೇ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದ್ದು, ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.