Friday, June 13, 2025

ಮೂಡಬಿದಿರೆ: ‘ಇದೇ ರೀತಿಯ ಚಿನ್ನದ ಸರ ಮಾಡಬೇಕಾಗಿದೆ. ಒಮ್ಮೆ ಕೊಡಿ..’ ಎಂದು ನಂಬಿಸಿ ಎಸ್ಕೇಪ್ ಆದ‌ ಖದೀಮ

ಮೂಡಬಿದಿರೆ: ನಡೆದುಕೊಂಡು ಹೋಗುತ್ತಿರುವಾಗ ಚಿನ್ನ ಎಗರಿಸಿ ಪರಾರಿಯುವ ಬಗ್ಗೆ ನಾವು ಕೇಳಿದ್ದೇವೆ. ಆದರೆ‌ ಇಲ್ಲೊಬ್ಬ ವಿಚಿತ್ರವಾಗಿ ಕಳ್ಳತನ‌ ಮಾಡಿದ್ದಾನೆ. ಪರಿಚಿತರಂತೆ ವರ್ತಿಸಿ ಚಿನ್ನದ ಸರವನ್ನು ಎಗರಿಸಿದ್ದಾನೆ. ಹೇಗೆ ಅಂತೀರಾ ಮುಂದೆ ಓದಿ.

ಮೂಡಬಿದಿರೆಯ ನಾರಾವಿಯ ಸುಂದರಿ ಪೂಜಾರಿ ಎಂಬವರು ತನ್ನ ಮಗಳ ಮನೆಗೆ ಹೋಗಲೆಂದು ಬಸ್ಸು ಹತ್ತಿ‌ ಮೂಡಬಿದಿರೆ ಬಸ್‌ ಸ್ಟ್ಯಾಂಡ್ ಗೆ ಬಂದು ಹಣ್ಣು ತರಲೆಂದು ಅಂಗಡಿಗೆ ಹೋಗಿದ್ದಾರೆ.

ಆ ವೇಳೆ ಅಲ್ಲೇ ಇದ್ದ ಅಪರಿಚಿತ ವ್ಯಕ್ತಿ ಮಹಿಳೆಯ ಬಳಿ ಬಂದು ಪರಿಚಯಸ್ಥರಂತೆ ನಾಟಕ ಮಾಡಿದ್ದಾನೆ. ಕೊರಳಲ್ಲಿದ್ದ ಚಿನ್ನದ ಸರವನ್ನು ನೋಡಿ ಪರಿಚಯಸ್ಥನಂತೆ ನಟಿಸಿ, ಇದೇ ರೀತಿಯ ಚಿನ್ನದ ಸರ ಮಾಡಿಸಬೇಕಿದೆ‌ ಎಂದಿದ್ದಾನೆ. ಅದನ್ನು ನಂಬಿದ ಮಹಿಳೆ ಚಿನ್ನದ ಸರ ತೆಗೆದುಕೊಟ್ಟಿದ್ದಾರೆ.

ಚಿನ್ನದ ಸರ ಪಡೆದಿದ್ದೇ ತಡ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ವಾಪಸ್ಸು ನೀಡಿದೇ ಮೋಸ ಮಾಡಿದ್ದಾನೆ. ಈ ಬಗ್ಗೆ ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Latest Articles