ವಿಶ್ವದ ದೈತ್ಯ ಬಾಡಿಬಿಲ್ಡರ್ ಎಂದೇ ಖ್ಯಾತಿ ಪಡೆದಿದ್ದ ಗೋಲೆಮ್ ಯೆಫಿಮ್ಚ್ಕಿ (Golem Yefimchyk) ತಮ್ಮ 36ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಸೆಪ್ಟಂಬರ್ 6 ರಂದು ಈ ದೈತ್ಯಕಾಯನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದು ಕೋಮಾಗೆ ಜಾರಿದ್ದ ಗೋಲೆಮ್ ಕೆಲವು ದಿನಗಳ ನಂತರ ಇಹಲೋಕವನ್ನು ತ್ಯಜಿಸಿದ್ದಾರೆ. ಸದಾ ಜಿಮ್ನಲ್ಲಿ ದೇಹವನ್ನು ಹುರಿಗೊಳಸುತ್ತಿದ್ದ ಗೋಲೆಮ್ ಯಾವುದೇ ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ಎಂದಿಗೂ ಭಾಗವಹಿಸಿದ್ದಿಲ್ಲ.
ಆದರೂ ಪ್ರೊಫೆಷನಲ್ ಬಾಡಿ ಬಿಲ್ಡರ್ಗಳೇ ನಾಚುವಂತಹ ದೇಹವನ್ನಿಟ್ಟುಕೊಂಡಿದ್ದರು ಗೋಲೆಮ್. ಆದರೆ ತಮ್ಮ ದೇಹದಾರ್ಢ್ಯದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಅವರಿಗೆ ಅಲ್ಪಸ್ವಲ್ಪ ಆದಾಯ ಹುಟ್ಟಿಕೊಳ್ಳುತ್ತಿತ್ತು.
ಬೆಲುರಸ್ನ ಈ ಬಾಡಿಬಿಲ್ಡರ್ನ ರಟ್ಟೆಯ ಗಾತ್ರ ಅಂದ್ರೆ ಬೈಸಿಪ್ಸ್ 25 ಇಂಚಿನಷ್ಟು ಇತ್ತು.. ಅವರು ನಿತ್ಯ 16,500 ಕ್ಯಾಲರೀಸ್ ಸೇವಿಸುತ್ತಿದ್ದರು ಎಂದು ಹೇಳಲಾಗುತ್ತದೆ. ಇತ್ತೀಚೆಗೆ ಅವರು 273 ಕೆಜಿ ಬೆಂಚ್ಪ್ರೆಸ್, 318 ಕೆಜಿಯ ಡೆಡ್ಲಿಫ್ಟ್ ಹಾಗೂ 318 ಕೆಜಿ ಸ್ಕ್ವಾಟ್ ವರ್ಕೌಟ್ ಮಾಡಿದ್ದರು ಎನ್ನಲಾಗುತ್ತಿದೆ.