Monday, October 14, 2024

ಉಪ್ಪಿನಂಗಡಿ: ವಿದ್ಯಾರ್ಥಿ ತಪ್ಪು ಮಾಡಿದ್ದಕ್ಕೆ ಬೆತ್ತದಿಂದ ಹೊಡೆದ ಶಿಕ್ಷಕ – ಪ್ರಕರಣ ದಾಖಲು

ಉಪ್ಪಿನಂಗಡಿ: ಸರ್ಕಾರಿ ಪ್ರೌಢಶಾಲೆಯೊಂದರ ವಿದ್ಯಾರ್ಥಿ ತಪ್ಪು ಮಾಡಿದ್ದಾನೆ ಎಂದು ಶಿಕ್ಷಕರೊಬ್ಬರು 3 ದಿನ ಬೆತ್ತದಿಂದ ಹೊಡೆದಿದ್ದು, ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿದ್ಯಾರ್ಥಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಹಲ್ಲೆಗೆ ಒಳಗಾದ ವಿದ್ಯಾರ್ಥಿ ಬೆಳ್ತಂಗಡಿ ತಾಲ್ಲೂಕು ಉರುವಾಲು ನಿವಾಸಿ. ಹಲ್ಲೆ ನಡೆಸಿದ ಆರೋಪದ ಮೇಲೆ ಇಂಗ್ಲಿಷ್ ಶಿಕ್ಷಕನ ವಿರುದ್ಧ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿ ಶಿಕ್ಷಕ ವಿದ್ಯಾರ್ಥಿಗೆ ಸೆ.9, 10, 11ರಂದು ಬೆತ್ತದಿಂದ ಹೊಡೆದ್ದರು. ಈ ವಿಚಾರವನ್ನು ವಿದ್ಯಾರ್ಥಿ ಯಾರಿಗೂ ತಿಳಿಸಿರಲಿಲ್ಲ. ನೋವು ಜಾಸ್ತಿಯಾದಾಗ ಮನೆಯವರು ವಿಚಾರಿಸಿದ್ದಾರೆ. ಆಗ ನಡೆದ ಘಟನೆಯನ್ನು ತಿಳಿಸಿದ್ದಾನೆ.

ಬಳಿಕ ಮನೆಯವರು ವಿದ್ಯಾರ್ಥಿಯನ್ನು ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಶಿಕ್ಷಕನ ವಿರುದ್ಧ ದೂರು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Related Articles

Latest Articles