Sunday, May 18, 2025

Paris Olympic: ಒಂದೇ ಒಂದು ಕೆಜಿಯಿಂದ ಮೆಡಲ್​ ಮಿಸ್ ಮಾಡಿಕೊಂಡ ಮೀರಾಬಾಯಿ ಚಾನು

2024ರ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಭಾರತೀಯ ಸ್ಪರ್ಧಿಗಳು ಯಶಸ್ಸಿನ ಕಡೆಗೆ ಮುನ್ನುಗ್ಗುತ್ತಿರುವ ಬೆನ್ನಲ್ಲೇ ಆಘಾತಕಾರಿ ಸುದ್ದಿಗಳು ಹೊರ ಬೀಳುತ್ತಿವೆ. ಭಾರತಕ್ಕೆ ಶೂಟಿಂಗ್​ನಲ್ಲಿ 3 ಪದಕಗಳು ಬಂದ ಮೇಲೆ ಮತ್ತೆ ಯಾವ ಸ್ಪರ್ಧೆಯಲ್ಲೂ ಪದಕಗಳು ಬಂದಿಲ್ಲ.

ಇದರ ಬೆನ್ನಲ್ಲೇ ಮತ್ತೊಂದು ಪದಕ ಕೇವಲ ಒಂದೇ ಒಂದು 1ಕೆ.ಜಿಯಲ್ಲಿ ಕೈತಪ್ಪಿದೆ. ಸದ್ಯ ಭಾರತ ಪದಕಗಳ ಪಟ್ಟಿಯಲ್ಲಿ 67ನೇ ಸ್ಥಾನದಲ್ಲಿದೆ.

ಭಾರ ಎತ್ತುವ ಸ್ಪರ್ಧೆಯಲ್ಲಿ ಭಾರತೀಯ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಅವರು 49 ಕೆ.ಜಿ ವಿಭಾಗದಲ್ಲಿ ಸ್ಪರ್ಧೆ ಮಾಡಿದ್ದರು. ಈ ಸ್ಪರ್ಧೆಯಲ್ಲಿ ಮೀರಾಬಾಯಿ ಚಾನು ಒಟ್ಟು 199 ಕೆ.ಜಿ ಭಾರವನ್ನು ಎತ್ತುವ ಮೂಲಕ 4ನೇ ಸ್ಥಾನ ಪಡೆದುಕೊಂಡಿದ್ದಾರೆ.

ಹೀಗಾಗಿ ಭಾರತಕ್ಕೆ ಮತ್ತೊಂದು ಪದಕ ಸ್ವಲ್ಪದರಲ್ಲೇ ಕೈತಪ್ಪಿದೆ ಎಂದು ತಿಳಿದು ಬಂದಿದೆ. ಮೀರಾಬಾಯಿ ನಾಲ್ಕನೇ ಸ್ಥಾನಿಯಾಗಿದ್ದಾರೆ‌. ಚಾನು ಅವರು ಟೋಕಿಯೊ ಒಲಿಂಪಿಕ್ ನಲ್ಲಿ ಬೆಳ್ಳಿ ಪದಕ ವಿಜೇತರಾಗಿದ್ದರು.‌ ಹೀಗಾಗಿ ಇವರು ಪದಕ ಗೆಲ್ಲುತ್ತಾರೆ ಎಂಬ ಅಛಲ ನಂಬಿಕೆಯಿತ್ತು.

Related Articles

Latest Articles