ಮಣಿಪಾಲ: ಮಧ್ಯರಾತ್ರಿ 2ರ ಸುಮಾರಿಗೆ ಹಾಸ್ಟೆಲ್ ಗೆ ನುಗ್ಗಿ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಶಿವಳ್ಳಿ ಗ್ರಾಮದ ನವೀನ್ ನಾಯಕ್ (22) ಎಂಬ ಶಂಕಿತ ಆರೋಪಿಯನ್ನು ಬಂಧಿಸಲಾಗಿದೆ.
ಮಣಿಪಾಲದ ಅನಂತ್ ನಗರದಲ್ಲಿನ ಹಿಂದುಳಿದ ವರ್ಗಗಳ ಮೆಟ್ರಿಕ್ ಆಧಾರಿತ ಹಾಸ್ಟೆಲ್‌ಗೆ ಸೆಪ್ಟೆಂಬರ್ 1 ರಂದು, ಸರಿಸುಮಾರು ಮುಂಜಾನೆ 2:15 ಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಪ್ರವೇಶಿಸಿದ್ದಾನೆ. ಹಾಸ್ಟೆಲ್ ಕೊಠಡಿಯ ಕಿಟಕಿಯ ಬಳಿ ಮಂಚದ ಮೇಲೆ ಮಲಗಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಕಿರುಕುಳ ನೀಡಿದ್ದಾನೆ ಎಂದು ದೂರು ದಾಖಲಾಗಿತ್ತು.
ಇಂದ್ರಾಳಿ ರೈಲ್ವೇ ಬಳಿ ನವೀನ್ ನಾಯಕ್ (22) ಎಂಬ ಶಂಕಿತನನ್ನು ಗುರುತಿಸಿ ಬಂಧಿಸಲಾಗಿದೆ. ಈತ 2023ರಲ್ಲಿ ಉಡುಪಿಯ ಪುತ್ತೂರಿನಲ್ಲಿ ಇದೇ ರೀತಿಯ ಗಲಾಟೆ ಪ್ರಕರಣದಲ್ಲಿ ನವೀನ್ ನಾಯಕ್ ಭಾಗಿಯಾಗಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.
ಈ ಘಟನೆಗೆ ಸಂಬಂಧಿಸಿದ ಪ್ರಕರಣ ಸದ್ಯ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಹಂತದಲ್ಲಿದ್ದು, ನ್ಯಾಯಾಂಗ ಪರಿಶೀಲನೆ ನಡೆಸುತ್ತಿದ್ದಾರೆ. ಪೊಲೀಸರು ನವೀನ್ ನಾಯಕ್ ನನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ.