Wednesday, November 6, 2024

ಹಿಂದಿ ಮಾತನಾಡು , ಕನ್ನಡದಲ್ಲಿ ಮಾತನಾಡಬೇಡ..! ಯುಪಿ ಮೂಲದವರಿಂದ ಮಾರಣಾಂತಿಕ ಹಲ್ಲೆ

ಕನ್ನಡ ಮಾತನಾಡಿದ್ದಕ್ಕೆ ಕಾರ್ಮಿಕನ ಮೇಲೆ ಮೂವರಿಂದ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಬೆಂಗಳೂರು ನಗರದ ಆನೇಕಲ್ ಪಟ್ಟಣದಲ್ಲಿ ನಡೆದಿದೆ. ಸದ್ಯ ಹಲ್ಲೆ ಮಾಡಿದ ಉತ್ತರ ಪ್ರದೇಶ ಮೂಲದ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಹಿಂದಿ ಮಾತನಾಡು ಎಂದು ಕಾರ್ಮಿಕ ಶಿವಲಿಂಗ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಲಾಗಿದೆ. ಹಲ್ಲೆಗೊಳಗಾದ ಕಾರ್ಮಿಕ ಶಿವಲಿಂಗ ಕೃಷ್ಣಮೂರ್ತಿ ಕಾರ್ಖಾನೆಯಲ್ಲಿ ಮಗ್ಗದ ಕೆಲಸ ಮಾಡುತ್ತಿದ್ದ. ಈ ಕಾರ್ಖಾನೆಯಲ್ಲೇ ಉತ್ತರ ಪ್ರದೇಶದ ಮೂವರು ಕೆಲಸ ಮಾಡುತ್ತಿದ್ದರು. ನಮ್ಮ ಜೊತೆ ಹಿಂದಿಯಲ್ಲಿ ಮಾತಾಡು, ಕನ್ನಡದಲ್ಲಿ ಮಾತನಾಡಬೇಡ ಎಂದು ಶಿವಲಿಂಗ ಜೊತೆ ಕಿರಿಕ್ ಮಾಡಿ ಹಲ್ಲೆ ಮಾಡಿದ್ದಾರೆ.

ಕಬ್ಬಿಣದ ರಾಡ್, ಮಗ್ಗದ ವಸ್ತುಗಳಿಂದ ಶಿವಲಿಂಗನ ಮೇಲೆ ಹಲ್ಲೆ ಮಾಡಲಾಗಿದ್ದು, ತಲೆ, ಕಿವಿಭಾಗಕ್ಕೆ ಗಾಯಗಳಾಗಿವೆ. ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು, ಬಳಿಕ ಹೆಚ್ಚುವರಿ ಚಿಕಿತ್ಸೆಗಾಗಿ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

Related Articles

Latest Articles