Saturday, June 22, 2024

ಮಂಗಳೂರು: ರಾ. ಹೆದ್ದಾರಿಯಲ್ಲಿ ಪಿಕಪ್‌ನಿಂದ ರಸ್ತೆಗೆ ಜಾರಿದ ಕಬ್ಬಿಣದ ಸರಳು!

ಮಂಗಳೂರು: ತೆರೆದ ವಾಹನಗಳಲ್ಲಿ ಕಬ್ಬಿಣದ ಸರಳುಗಳನ್ನು ಕೊಂಡೊಯ್ಯುವ ಮೂಲಕ ಇತರರ ಪ್ರಾಣಾಪಾಯಕ್ಕೆ ಕಾರಣವಾಗುವ ಘಟನೆಗಳು ನಗರ ವ್ಯಾಪ್ತಿಯಲ್ಲಿ ಆಗಾಗ ನಡೆಯುತ್ತಿವೆ. ನ. 24 ರಂದು ಬಂಗ್ರ ಕೂಳೂರು ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂತಹುದೇ ಘಟನೆ ಸಂಭವಿಸಿದೆ.

ಕೂಳೂರು ಮೇಲ್ಸೇತುವೆಯಿಂದ ಕೊಟ್ಟಾರ ಚೌಕಿ ಕಡೆಗೆ ಸಾಗುತ್ತಿದ್ದ ಪಿಕಪ್‌ ವಾಹನದಲ್ಲಿ ಲೋಡ್‌ ಮಾಡಲಾಗಿದ್ದ ಟನ್‌ಗಟ್ಟಲೆ ತೂಕದ ಕಬ್ಬಿಣದ ಸರಳುಗಳು ವಾಹನದಿಂದ ಜಾರಿ ರಸ್ತೆಗೆ ಬಿದ್ದಿವೆ. ಅದೃಷ್ಟಾವಶಾತ್‌ ಯಾವುದೇ ಅಪಾಯ ಸಂಭವಿಸಿಲ್ಲ. ಹೆದ್ದಾರಿಯಲ್ಲಿ ಸ್ವಲ್ಪ ಕಾಲ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

ನಗರದಲ್ಲಿ ಹಗಲು ಮತ್ತು ರಾತ್ರಿ ವೇಳೆ ಟಿಪ್ಪರ್‌, ಪಿಕಪ್‌ ವಾಹನಗಳಲ್ಲಿ ಕಬ್ಬಿಣ, ಸಿಮೆಂಟ್‌, ಕಲ್ಲು, ಮರಳು, ಮಣ್ಣು, ಜಲ್ಲಿ, ವಿದ್ಯುತ್‌ ಕಂಬ, ಅಲ್ಯುಮೀನಿಯಂ ಪಟ್ಟಿಗಳು ಸೇರಿದಂತೆ ವಿವಿಧ ಅಪಾಯಕಾರಿ ವಸ್ತುಗಳನ್ನು ಯಾವುದೇ ರಕ್ಷಣೆ ಇಲ್ಲದೆ ಕೊಂಡೊಯ್ಯಲಾಗುತ್ತಿದೆ. ಕೆಲವು ಜಂಕ್ಷನ್‌ಗಳಲ್ಲಿ ಪೊಲೀಸರು ಇದ್ದರೂ ಇದನ್ನು ತಡೆಯಲು ಸಾಧ್ಯವಾಗುತ್ತಿಲ್ಲ.

Related Articles

Latest Articles