ಮಂಡ್ಯ: ಸೊಸೆ ಸಾವಿನಿಂದ ನೊಂದು ಅತ್ತೆ ಹೃದಯಾಘಾತದಿಂದ ಸಾವನ್ನಪ್ಪಿರುವ ಹೃದಯಾಘಾತದಿಂದ ಮೃತಪಟ್ಟ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ ಕಾಡು ಅಂಕನಹಳ್ಳಿ ಗ್ರಾಮದಲ್ಲಿ ನ. 23 ರಂದು ನಡೆದಿದೆ.
ಅನಾರೋಗ್ಯದಿಂದ ನ.23 ರ ಸಂಜೆ ಸುಶೀಲಾ(42) ಮೃತಪಟ್ಟರೆ, ಸೊಸೆ ಸಾವಿನ ಸುದ್ದಿ ಕೇಳಿ ಅತ್ತೆ ಹುಚ್ಚಮ್ಮ(75) ಸಾವನ್ನಪ್ಪಿದ್ದಾರೆ. ಅತ್ತೆ-ಸೊಸೆ ಸಾವಿನಿಂದ ಕುಟುಂಬ ದುಃಖದಲ್ಲಿ ಮುಳುಗಿದ್ದು, ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.