Sunday, November 3, 2024

ಮಂಗಳೂರು: ಟೆಂಪೋ ಉರುಳಿಬಿದ್ದು ಬೈಕ್ ಸವಾರ ಮೃತ್ಯು

ಮಂಗಳೂರು: ಬೈಕ್ ಸವಾರನ ಮೇಲೆ ಟೆಂಪೊವೊಂದು ಉರುಳಿಬಿದ್ದು ಬೈಕ್ ಸವಾರ ಮೃತಪಟ್ಟ ಘಟನೆ ತೆಂಕ ಉಳಿಪಾಡಿಯ ಬಾಮಿ ಶಾಲೆಯ ಸಮೀಪದ ಇಳಿಜಾರು ಪ್ರದೇಶದಲ್ಲಿ ನಡೆದಿದೆ.

ಸುಂಕದಕಟ್ಟೆಯ ಚಾವಂಡಿಪಲ್ಕೆ ನಿವಾಸಿ ಶ್ರೀನಿವಾಸ (54) ಮೃತರು. ಮಧ್ಯಾಹ್ನ ಕೈಕಂಬದಿಂದ ಗುರುಪುರಕ್ಕೆ ಹೋಗುತ್ತಿದ್ದ ಖಾಲಿ ಟೆಂಪೊವೊಂದು ಹೆದ್ದಾರಿ ಬದಿಯ ಹೊಂಡದಲ್ಲಿ ಸಿಲುಕಿತ್ತು.

ಈ ವೇಳೆ ಟೆಂಪೋ ಚಾಲಕ ಒಮ್ಮೆಲೇ ತೆಗೆಯುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ಪಲ್ಟಿಯಾಗಿದೆ. ಈ ವೇಳೆ ಹೆದ್ದಾರಿಯಲ್ಲಿ ಸಾಗುತ್ತಿದ್ದ ಬೈಕ್ ಟೆಂಪೋ ಅಡಿಯಲ್ಲಿ ಸಿಲುಕಿದ್ದು ಗಂಭೀರ ಗಾಯಗೊಂಡ ಶ್ರೀನಿವಾಸ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅಷ್ಟೋತ್ತಿಗಾಗಲೇ ಶ್ರೀನಿವಾಸ್ ಮೃತಪಟ್ಟಿದ್ದರು ಎಂದು ಹೇಳಲಾಗಿದೆ.

Related Articles

Latest Articles