Thursday, July 3, 2025

ಮಂಗಳೂರು; ವೃದ್ಧ ಮಾವನಿಗೆ ಥಳಿಸಿದ ಸೊಸೆ – ಇಲ್ಲಿದೆ ವಿಡಿಯೋ

ದಕ್ಷಿಣ ಕನ್ನಡ: ವೃದ್ಧ ಮಾವನಿಗೆ ಕ್ರೂರ ಸೊಸೆಯೊಬ್ಬಳು ಬನಬಂದಂತೆ ಥಳಿಸಿರುವ ಘಟನೆ ಮಂಗಳೂರಿನ ಕುಲಶೇಖರದಲ್ಲಿ ನಡೆದಿದೆ. ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ನಗರದ ನಿವಾಸಿ ಪದ್ಮನಾಭ ಸುವರ್ಣ (76) ಹಲ್ಲೆಗೊಳಗಾದರೆ, ಸೊಸೆ ಉಮಾ ಶಂಕರಿ ಹಲ್ಲೆ ನಡೆಸಿದ ಆರೋಪಿ.

ಉಮಾ ಶಂಕರಿ ಮಂಗಳೂರಿನ ಅತ್ತಾವರದ ಕೆಇಬಿಯಲ್ಲಿ ಅಧಿಕಾರಿಯಾಗಿದ್ದಾಳೆ. ವೃದ್ಧ ಮಾವನಿಗೆ ಆಕೆ ವಾಕಿಂಗ್‌ ಸ್ಟಿಕ್‌ನಲ್ಲಿ ಮನಬಂದಂತೆ ಥಳಿಸಿದ್ದಾಳೆ.

ಉಮಾ ಶಂಕರಿ ಪತಿ ಪ್ರೀತಂ ಸುವರ್ಣ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿದಾಗ ವೃದ್ಧ ತಂದೆಗೆ ಪತ್ನಿ ಥಳಿಸಿರುವ ವಿಚಾರ ಬೆಳಕಿಗೆ ಬಂದಿದೆ. ಘಟನೆ ಮಾರ್ಚ್‌ 9 ರಂದು ನಡೆದಿದ್ದು, ಗಾಯಾಳು ಪದ್ಮನಾಭ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಉಮಾ ಶಂಕರಿ ವಿರುದ್ಧ ಪದ್ಮನಾಭ ಅವರ ಪುತ್ರಿ ಪ್ರಿಯಾ ಸುವರ್ಣ ಪೊಲೀಸರಿಗೆ ದೂರು ನೀಡಿದ್ದಾರೆ. ಸಿಸಿಟಿವಿ ವಿಡಿಯೋ ಆಧಾರಿಸಿ ಕಂಕನಾಡಿ ಪೊಲೀಸರು ಕೊಲೆ ಯತ್ನ ಕೇಸ್‌ ದಾಖಲು ಮಾಡಿದ್ದಾರೆ.

Related Articles

Latest Articles