Wednesday, June 19, 2024

ನೇತ್ರಾವತಿ ನದಿಯಲ್ಲಿ ಸ್ವಚ್ಚಂದವಾಗಿ ವಿಹರಿಸಿದ ಕಾಡಾನೆ..!

ದಕ್ಷಿಣ ಕನ್ನಡ: ಉಪ್ಪಿನಂಗಡಿಯ ನೇತ್ರಾವತಿ ನದಿ ಕಿನಾರೆಯಲ್ಲಿ ಮತ್ತೆ ಕಾಡಾನೆ ಕಂಡು ಬಂದಿದೆ. ನಾಳ ಸಮೀಪದ ಪಾಂಡಿಬೆಟ್ಟು ಗ್ರಾಮಸ್ಥರ ಕೃಷಿ ತೋಟಕ್ಕೆ ನುಗ್ಗಿದ ಕಾಡಾನೆ ಕರಂಬಾರು ಸುದೆಪಿಲ ಸಮೀಪದ ನದಿಯಲ್ಲಿ ಸ್ವಚ್ಚಂದವಾಗಿ ವಿಹರಿಸುತ್ತಿರುವುದು ಪತ್ತೆಯಾಗಿದೆ.

ನದಿ ಮತ್ತು ಕಿನಾರೆಯಲ್ಲಿ ಸ್ವಚಂದವಾಗಿ ಸುತ್ತಾಡುವ ಕಾಡಾನೆಯ ದೃಶ್ಯ ಸ್ಥಳೀಯರು ಮೊಬೈಲ್ ನಲ್ಲಿ ಸೆರೆಹಿಡಿದ್ದಾರೆ.ಈ ಆನೆ ಕೊಯ್ಯೂರು, ಕಣಿಯೂರು ದಾಟಿ ಮಲೆಂಗಲ್ಲು, ಪದ್ಮುಂಜ ಪೊಯ್ಯ ಮೂಲಕ ಮೊಗ್ರು ಗ್ರಾಮದ ಬುಳೇರಿಗೆ ಬಂದು ಕರಂಬಾರು ಸುದೆಪಿಲ ಸಮೀಪ ನೇತ್ರಾವತಿಯಲ್ಲಿ ಜಳಕ ಮಾಡಿ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಕಡೆಗೆ ಸಂಚಾರಿಸಿದೆ. ಮತ್ತೆ ಈ ಒಂಟಿ ಸಲಗ ಎಲ್ಲಿ ಪ್ರತ್ಯಕ್ಷವಾಗಿ ತೊಂದರೆ ಕೊಡಲಿದೆಯೋ ಎಂಬ ಆತಂಕ ಜನತೆಯಲ್ಲಿದೆ.

Related Articles

Latest Articles