ಪಣಂಬೂರು: ಮೆಡಿಕಲ್ ಶಾಪ್ ಗೆ ತೆರಳುತ್ತಿದ್ದ ಯುವಕನೋರ್ವನಿಗೆ ಮೂವರು ಯುವಕರ ತಂಡ ಚೂರಿ ಇರಿದು ಪರಾರಿಯಾಗಿರುವ ಘಟನೆ ಅ. 17 ರ ರಾತ್ರಿ ವರದಿಯಾಗಿದೆ.
ಬೆಂಗ್ರೆ ನಿವಾಸಿ ಮುಹಮ್ಮದ್ ಅಕ್ರಂ ಚೂರಿ ಇರಿತಕ್ಕೊಳಗಾದ ಯುವಕ ಅದೇ ಪರಿಸರದವರೆನ್ನಲಾದ ಸಮದ್, ಇಜಾಝ್ ಮತ್ತು ಇರ್ಫಾನ್ ಹಲ್ಲೆಗೈದ ಆರೋಪಿಗಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಚೂರಿ ಇರಿತದಿಂದ ಗಂಭೀರ ಗಾಯಗೊಂಡಿದ್ದ ಮುಹಮ್ಮದ್ ಅಕ್ರಂ ಅವರನ್ನು ಸ್ಥಳೀಯರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.