Sunday, November 10, 2024

ಮೈದಾನದಲ್ಲಿ ನಮಾಜ್ ಮಾಡಿದ ರಿಜ್ವಾನ್ ವಿರುದ್ಧ ದೂರು ದಾಖಲು!

ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ವಿರುದ್ಧ ಮುಗ್ಗರಿಸಿದೆ. ಆದರೆ ಪಾಕಿಸ್ತಾನ ತಂಡಕ್ಕೆ ಮೇಲಿಂದ ಮೇಲೆ ವಿವಾದಗಳು ಅಂಟಿಕೊಳ್ಳುತ್ತಿದೆ. ನೆದರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಬ್ಯಾಟ್ಸ್‌ಮನ್ ಮೊಹಮ್ಮದ್ ರಿಜ್ವಾನ್ ಹೈದರಾಬಾದ್ ಕ್ರೀಡಾಂಗಣದಲ್ಲಿ ನಮಾಜ್ ಮಾಡಿದ್ದು ಹಲವರ ಆಕ್ರೋಶಕ್ಕೆ‌ ಕಾರಣವಾಗಿದ್ದು ಸತ್ಯ.

ಇದೀಗ ಮೊಹಮ್ಮದ್ ರಿಜ್ವಾನ್ ವಿರುದ್ಧ ಐಸಿಸಿಯಲ್ಲಿ ದೂರು ದಾಖಲಾಗಿದೆ. ಭಾರತದ ವಕೀಲ ದೂರು ದಾಖಲಿಸಿದ್ದು, ಕ್ರೀಡೆಯಲ್ಲಿ ಧಾರ್ಮಿಕತೆ ಬೆರೆಸಿ ಕ್ರೀಡಾ ಸ್ಪೂರ್ತಿಗೆ ಅಡ್ಡಿಯಾಗಿದ್ದಾರೆ ಎಂದು ದೂರಿದ್ದಾರೆ.

ರಿಜ್ವಾನ್ ವಿರುದ್ಧ ಭಾರತದ ವಕೀಲ ವಿನೀತ್ ಜಿಂದಾಲ್ ಐಸಿಸಿಯಲ್ಲಿ ದೂರು ದಾಖಲಿಸಿದ್ದಾರೆ. ಮೊಹಮ್ಮದ್ ರಿಜ್ವಾನ್ ಭಾರತೀಯ ಅಭಿಮಾನಿಗಳ ಮುಂದೆ ತಾನು ಮುಸ್ಲಿಂ ಎಂದು ತೋರಿಸಿಕೊಳ್ಳಲು ನಮಾಜ್ ಮಾಡಿದ್ದಾರೆ. ಶ್ರೀಲಂಕಾ ವಿರುದ್ದದ ಪಂದ್ಯದ ಬಳಿಕ ಗೆಲುವನ್ನು ಗಾಜಾ ಜನರಿಗೆ ಅರ್ಪಿಸಿದ್ದರು. ಈ ಮೂಲಕ ಕ್ರೀಡೆಯಲ್ಲಿ ಧರ್ಮದ ಜೊತೆಗೆ ರಾಜಕೀಯ ಹಾಗೂ ಸಿದ್ಧಾಂತಗಳನ್ನು ಬೆರೆಸಿದ್ದಾರೆ.

ಇದು ಕ್ರೀಡಾ ಸ್ಪೂರ್ತಿ ಹಾಗೂ ಕ್ರೀಡಾಮನೋಭಾವಕ್ಕೆ ವಿರುದ್ಧವಾಗಿದೆ. ಐಸಿಸಿ ನಿಯಮ ಉಲ್ಲಂಘನೆಯಾಗಿದೆ ಎಂದು ವಿನೀತ್ ಜಿಂದಾಲ್ ತಮ್ಮ ದೂರಿನಲ್ಲಿ ಹೇಳಿದ್ದಾರೆ.

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ವಿರುದ್ದ 10 ವಿಕೆಟ್ ಗೆಲುವು ದಾಖಲಿಸಿದ ಪಾಕಿಸ್ತಾನ ಸಂಭ್ರಮ ಆಚರಿಸಿತ್ತು. ಈ ವೇಳೆಯೂ ಮೊಹಮ್ಮದ್ ರಿಜ್ವಾನ್ ಮೈದಾನದಲ್ಲಿ ನಮಾಜ್ ಮಾಡಿದ್ದರು. ರಿಜ್ವಾನ್ ತಮ್ಮ ಕ್ರಿಕೆಟ್ ಆಟವನ್ನು ಕ್ರೀಡೆಯಾಗಿ ನೋಡುತ್ತಿಲ್ಲ, ಧಾರ್ಮಿಕತೆ ಆಚೆಗೆ ಕೊಂಡೊಯ್ದಿದ್ದಾರೆ.

ರಿಜ್ವಾನ್ ನಮಾಜ್ ಮಾಡಿರುವನ್ನು ಪಾಕಿಸ್ತಾನ ಮಾಜಿ ಕ್ರಿಕೆಟಿಗ ವಕಾರ್ ಯೂನಿಸ್ ಹೊಗಳಿದ್ದರು. ಭಾರತದ ಅಭಿಮಾನಿಗಳ ಮುಂದೆ ಮೊಹಮ್ಮದ್ ರಿಜ್ವಾನ್ ನಮಾಜ್ ಮಾಡಿರುವುದು ವಿಶೇಷ ಕ್ಷಣ ಎಂದು ಹೇಳಿಕೆ ನೀಡಿದ್ದಾರೆ. ಮೊಹಮ್ಮದ್ ರಿಜ್ವಾನ್ ಕ್ರಿಕೆಟ್ ಪಂದ್ಯವನ್ನು ಧಾರ್ಮಿಕತೆ ಹಾಗೂ ಧರ್ಮವನ್ನು ಪ್ರಚುರಪಡಿಸಲು ಮಾರ್ಗವಾಗಿ ಬಳಸಿಕೊಂಡಿದ್ದಾರೆ. ಇತರ ಹಲವು ಧರ್ಮ ಹಾಗೂ ಮತಗಳ ಅಭಿಮಾನಿಗಳ ಮುಂದೆ ತನ್ನ ಧಾರ್ಮಿಕತೆಯನ್ನು ಕ್ರಿಕೆಟ್ ಮೈದಾನದಲ್ಲಿ ಪ್ರದರ್ಶನ ಪಡಿಸಿವುದು ನಿಯಮದ ವಿರುದ್ಧವಾಗಿದೆ ಎಂದು ವಿನೀತ್ ಜಿಂದಾಲ್ ದೂರಿನಲ್ಲಿ ಹೇಳಿದ್ದಾರೆ.

Related Articles

Latest Articles