ಪ್ರೇಮಿಗಳು, ದಂಪತಿಗಳನ್ನು ಹಿಂಬಾಲಿಸಿ ಸುಲಿಗೆ ಮಾಡುತ್ತಿದ್ದ ಖತರ್ನಾಕ್ ವ್ಯಕ್ತಿಯನ್ನು ಬೆಂಗಳೂರು ನಗರದ ಹೆಚ್ಎಸ್ಆರ್ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಗಣೇಶ್ ಬಂಧಿತ ಆರೋಪಿ. ಪ್ರೇಮಿಗಳು ಮತ್ತು ದಂಪತಿಗಳನ್ನ ಹಿಂಬಾಲಿಸಿ ಮೊಬೈಲ್, ಹಣ, ಚಿನ್ನ ದೋಚುತ್ತಿದ್ದ. ಆರೋಪಿ ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಮೊಬೈಲ್ ಜಪ್ತಿ ಮಾಡಲಾಗಿದೆ. ಕಳೆದ ಡಿ.17ರಂದು HSR ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನಾಲ್ಕೈದು ವರ್ಷದ ಹಿಂದೆ ಪೊಲೀಸರಿಗೆ ಪಂಚನಾಮೆಗೆ ಸಹಕರಿಸಿದ್ದ. ಪೊಲೀಸರು ದಾಳಿ ಮಾಡುವ ಸ್ಟೈಲ್ನ್ನು ಗಣೇಶ್@ಗಣಿ ಗಮನಿಸಿದ್ದ. ಹಲವು ಪ್ರಕರಣದಲ್ಲಿ ನಕಲಿ ಪೊಲೀಸ್ ಸೋಗಿನಲ್ಲಿ ಹೋಗುತ್ತಿದ್ದ. ಪ್ರೇಮಿಗಳು, ದಂಪತಿಯನ್ನೇ ಟಾರ್ಗೆಟ್ ಮಾಡುತ್ತಿದ್ದ. ಪಾರ್ಕ್ಗಳ ಬಳಿ ಜೋಡಿಗಳ ಹಿಂದೆ ಹೋಗಿ ಬೆದರಿಸುತ್ತಿದ್ದ. ಮಾರಕಾಸ್ತ್ರ ತೋರಿಸಿ ಅವರಿಂದ ಮೊಬೈಲ್, ಹಣ, ಚಿನ್ನ ಕದಿಯುತ್ತಿದ್ದ.
ಉತ್ತರ ಭಾರತ ಮೂಲದ ದಂಪತಿ ಸಂಜೀವ್ ಬೋರಾ, ಜನ್ನಿಫರ್ ಬೆದರಿಸಿದ್ದ. ದಂಪತಿಯಿಂದ ಎರಡುವರೆ ಲಕ್ಷ ಸುಲಿಗೆ ಮಾಡಿದ್ದ. 2007ರಿಂದ ಕ್ರೈಂ ಆಯಕ್ಟಿವಿಟಿಯಲ್ಲಿ ಆರೋಪಿ ಗಣೇಶ್ ಭಾಗಿಯಾಗಿದ್ದ. ಬೆಂಗಳೂರಿನ ಹುಳಿಮಾವು, ಮಡಿವಾಳ, ಬೆಳ್ಳಂದೂರು, HSR ಲೇಔಟ್ ಸೇರಿ ನಗರದ ಹಲವು ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕೃತ್ಯವೆಸಗಿದ್ದ.