ಚಿಕ್ಕಮಗಳೂರು: ಮೂಡಿಗೆರೆ ಬಿಇಓ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಬೆಳಕಿಗೆ ಬಂದಿದೆ. ಲಂಚದ ಆಸೆಗೆ ಹೇಮಂತ್ ರಾಜ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಅನುಕಂಪದ ನೌಕರಿಗೆ ಶಿಫಾರಸ್ಸು ಮಾಡಲು ಹೇಮಂತ್ ರಾಜ್ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 15 ಸಾವಿರದಿಂದ 10 ಸಾವಿರಕ್ಕೆ ಬಂದಿದ್ದರು. ಈ ಕುರಿತಾಗಿ ಚಿಕ್ಕಮಗಳೂರು ನಗರದ ನೊಂದ ಮಹಿಳೆಯಿಂದ ಲೋಕಾಯುಕ್ತರಿಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆ ಲೋಕಾಯುಕ್ತ ಇನ್ಸ್ ಪೆಕ್ಟರ್ ಅನಿಲ್ ರಾಥೋಡ್ ತಂಡದಿಂದ ದಾಳಿ ನಡೆದಿದೆ.
ಇನ್ನು ಎಸ್.ಡಿ.ಎ. ಬಷೀರ್ ಅಹಮದ್ 15000 ಕೊಟ್ರೆ ಕೆಲಸ ಎಂದಿದ್ದರು. ಮನವಿ ಮಾಡಿಕೊಂಡಾಗ ಬಿಇಓ 10000ಕ್ಕೆ ಬಂದಿದ್ದರು. ಆದರೆ ಹಣ ನೀಡುವಾಗ ಬಿಇಓ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.