Monday, December 9, 2024

ಕಾಸರಗೋಡು: ಗಲ್ಫ್ ಉದ್ಯೋಗಿಯ ಮನೆಯಿಂದ 25 ಪವನ್ ಚಿನ್ನ ಸಹಿತ ನಗದು ಕಳವು

ಕುಂಬಳೆ: ಗಲ್ಫ್ ಉದ್ಯೋಗಿಯ ಮನೆಗೆ ನುಗ್ಗಿದ ಸರಿಸುಮಾರು 25 ಪವನ್ ಚಿನ್ನದೊಡವೆ ಮತ್ತು ಧಿರ್ಹಾ೦ ಕಳವುಗೈದ ಘಟನೆ ಶಾಂತಿಪಳ್ಳದಲ್ಲಿ ನಡೆದಿದೆ.

ಗಲ್ಫ್ ಉದ್ಯೋಗಿ, ಶಾಂತಿಪಳ್ಳದ ಸುಬೈರ್ ಎಂಬವರ ಮನೆಯಲ್ಲಿ ಈ ಕಳವು ನಡೆದಿದೆ. ರಂಜಾನ್‌ ಪ್ರಯುಕ್ತ ಸುಬೈರ್ ಕೆಲವು ದಿನಗಳ ಹಿಂದೆಯಷ್ಟೇ ಊರಿಗೆ ಬಂದಿದ್ದಾರೆ. ಉಳ್ಳಾರ್‌ನಲ್ಲಿರುವ ಸಹೋದರಿಯ ಮನೆಯಲ್ಲಿ ಇಫ್ತಾರ್ ಕೂಟದಲ್ಲಿ ಭಾಗವಹಿಸಲೆಂದು ಸುಬೈರ್ ತನ್ನ ಪತ್ನಿ, ಮಕ್ಕಳು ಮತ್ತು ತಾಯಿ ಜತೆ ನಿನ್ನೆ ಸಂಜೆ ಹೋಗಿದ್ದರು.

ಇಂದು ಬೆಳಿಗ್ಗೆ ಮನೆಗೆ ವಾಪಸ್ಸು ಆದಾಗಷ್ಟೇ ಕಳವು ನಡೆದ ವಿಷಯ ಅವರ ಗಮನಕ್ಕೆ ಬಂದಿದೆ. ಮನೆಯ ಎದುರುಗಡೆ ಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು ಕಪಾಟುಗಳನ್ನೆಲ್ಲಾ ಮುರಿದು ಅದರೊಳಗಿದ್ದ ನಗ-ನಗದು ದೋಚಿದ್ದಾರೆ.

ಕಪಾಟಿನೊಳಗಿದ್ದ ಇತರ ಸಾಮಗ್ರಿಗಳನ್ನೆಲ್ಲಾ ಹೊರಕ್ಕೆಸೆದು ಚೆಲ್ಲಾಪಿಲ್ಲಿಗೊಳಿಸಿದ್ದಾರೆ. ಈ ಬಗ್ಗೆ ನೀಡಿದ ಮಾಹಿತಿಯಂತೆ ಕುಂಬಳೆ ಪೊಲೀಸ್‌ ಠಾಣೆ ಪೊಲೀಸರ ತಂಡ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದೆ. ಬೆರಳಚ್ಚು ತಜ್ಞರು ಮತ್ತು ಶ್ವಾನದಳ ಈ ಮನೆಗೆ ಬಂದು ಅಗತ್ಯದ ಮಾಹಿತಿ ಸಂಗ್ರಹಿಸತೊಡಗಿದ್ದಾರೆ.

Related Articles

Latest Articles