Tuesday, June 25, 2024

ಈಜಲು ತೆರಳಿದ್ದ ಮೂವರು ದುರಂತ ಅಂತ್ಯ

ಮೈಸೂರು: ಕಪಿಲಾ ನದಿಯಲ್ಲಿ ಈಜಲೆಂದು ನೀರಿಗೆ ಇಳಿದ ಮೂವರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲೂಕಿನ ಗೊದ್ದನಪುರ ಗ್ರಾಮದ ಬಳಿ ನಡೆದಿದೆ.

ಬಿಹಾರ ಮೂಲದ ಮಿಲನ್ (25), ಮೋಹನ್ (19), ತರುಣ್ (19) ಮೃತ ಕಾರ್ಮಿಕರು. ಮೂಲತಃ ಬಿಹಾರ್ ರಾಜ್ಯದವರಾದ ಇವರು ಮೈಸೂರಿನ ನೆಸ್ಲೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು.

ಸೆಖೆ ತಾಳಲಾರದೆ ಈಜಲು ಎಂದು ಕಪಿಲ ನದಿ ನೀರಿಗೆ ಇಳಿದಿದ್ದಾರೆ. ಆದರೆ ಈ ವೇಳೆ ನದಿ ನೀರಿನ ಸುಳಿಗೆ ಸಿಕ್ಕ ಮೂವರು ಯುವಕರು ಹೊರ ಬರಲಾಗಿಲ್ಲ. ಇದರಿಂದ ನೀರಿನಲ್ಲಿ ಮುಳುಗಿ ಮೂವರು ಸಾವನ್ನಪ್ಪಿದ್ದಾರೆ.

ಈ ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ನಂಜನಗೂಡು ಗ್ರಾಮಾಂತರ ಠಾಣೆಯ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ನೀರಿನಲ್ಲಿ ಶೋಧ ಕಾರ್ಯ ಆರಂಭಿಸಿದ್ದಾರೆ. ಈ ವೇಳೆ ಮಿಲನ್​ ಮೃತದೇಹ ಪತ್ತೆಯಾಗಿದ್ದು ಹೊರ ತೆಗೆಯಲಾಗಿದೆ. ಆದರೆ ಇನ್ನಿಬ್ಬರ ಮೃತದೇಹಗಳಿಗಾಗಿ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ.

Related Articles

Latest Articles