Wednesday, February 19, 2025

ಕಂಡಕ್ಟರನ್ನೇ ಬಿಟ್ಟು ಹೊರಟ ಬಸ್ ಡ್ರೈವರ್! ವಿಡಿಯೋ ವೈರಲ್

ಕೊಡಗು: ಕಂಡಕ್ಟರ್‌ನನ್ನು ಬಿಟ್ಟು ಚಾಲಕನೊಬ್ಬ ಕೆಎಸ್‌ಆರ್‌ಟಿಸಿ ಬಸ್‌ ಓಡಿಸಿಕೊಂಡು ಬಂದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ವಿರಾಜ್ ಪೇಟೆಯಿಂದ ಮೈಸೂರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಈ ಘಟನೆ ನಡೆದಿದೆ.

ಚಾಲಕನೊಬ್ಬ ಬಸ್‌ ಓಡಿಸಿಕೊಂಡು ತುಂಬಾ ದೂರ ಬಂದಿದ್ದಾನೆ. ಈ ವೇಳೆ ಬಸ್‌ನಲ್ಲಿದ್ದ ಪ್ರಯಾಣಿಕರು ಕಂಡಕ್ಟರ್‌ ಬಸ್‌ನಲ್ಲಿ ಇಲ್ಲದಿರುವ ಬಗ್ಗೆ ತಿಳಿಸಿದ್ದಾರೆ. ಈ ವೇಳೆ ಚಾಲಕನಿಗೆ ಕಂಡಕ್ಟರ್‌ ಇಲ್ಲದಿರುವುದರ ಬಗ್ಗೆ ಅರಿವಾಗಿದೆ. ಇದರಿಂದಾಗಿ ಬಸ್‌ ಅನ್ನು ನಿಲ್ಲಿಸಿದ್ದಾನೆ.

ಅದೇ ಸಮಯಕ್ಕೆ ಸರಿಯಾಗಿ ಸ್ಕೂಟಿಯಲ್ಲಿ ಕಂಡಕ್ಟರ್‌ ಬಂದು ಬಸ್‌ ಹತ್ತಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ.

Related Articles

Latest Articles