Monday, October 14, 2024

ಫೋನ್ ಕದಿಯುವಾಗ ಸಿಕ್ಕಿಬಿದ್ದ ಕಳ್ಳ, ಪಾಠ ಕಲಿಸಲು 1 ಕಿ.ಮಿ ಎಳೆದೊಯ್ದ ರೈಲು ಪ್ರಯಾಣಿಕ!

ರೈಲು ನಿಲ್ದಾಣಗಳಿಂದ ರೈಲು ಪ್ರಯಾಣ ಮುಂದುವರಿಸಿದಾಗ ಕಿಟಕಿ ಬದಿಯಲ್ಲಿ ಕುಳಿತ, ಬಾಗಿಲು ಪಕ್ಕದಲ್ಲಿ ನಿಂತ ಪ್ರಯಾಣಿಕರ ಅಮೂಲ್ಯ ವಸ್ತುಗಳನ್ನು ಕಳ್ಳರು ಎಗರಿಸುತ್ತಾರೆ.

ಪ್ರತಿ ದಿನ ಈ ರೀತಿಯ ಘಟನೆಗಳು ವರದಿಯಾಗುತ್ತಲೇ ಇದೆ. ಹೀಗೆ ಕಳ್ಳರ ಗ್ಯಾಂಗ್ ಬಿಹಾರದ ರೈಲು ನಿಲ್ದಾಣದಲ್ಲಿ ಸಜ್ಜಾಗಿತ್ತು.

ಕಿಟಕಿ ಬದಿಯಲ್ಲಿ ಕುಳಿತು ಫೋನ್ ನೋಡುತ್ತಿದ್ದ ಪ್ರಯಾಣಿಕನ ಟಾರ್ಗೆಟ್ ಮಾಡಿದ ಕಳ್ಳ, ರೈಲು ಚಲಿಸಲು ಕಾದು ನಿಂತಿದ್ದ. ರೈಲು ಸಂಚಾರ ಆರಂಭಿಸಿದ ಬೆನ್ನಲ್ಲೇ ಫೋನ್ ಎಗರಿಸುವ ಪ್ರಯತ್ನ ಮಾಡಿದ್ದಾನೆ. ಆದರೆ ಮೊದಲೇ ಎಚ್ಚೆತ್ತುಕೊಂಡಿದ್ದ ಪ್ರಯಾಣಿಕ, ಕಳ್ಳನ ಕೈಗಳನ್ನು ಗಟ್ಟಿಯಾಗಿ ಹಿಡಿದಿದ್ದಾನೆ. ಅಷ್ಟರೊಳಗೆ ಇತರ ಸಹ ಪ್ರಯಾಣಿಕರು ಕಳ್ಳನ ಹಿಡಿದಿದ್ದಾರೆ. ಇತ್ತ ರೈಲು ಕೂಡ ಚಲಿಸಿದೆ. ಬರೋಬ್ಬರಿ 1 ಕಿಲೋಮೀಟರ್ ಕಳ್ಳ ಕಿಟಕಿಯಲ್ಲಿ ನೇತಾಡಿಕೊಂಡೆ ಸಾಗಿದ್ದಾನೆ. ಈ ವಿಡಿಯೋ ಬಾರಿ ವೈರಲ್ ಆಗಿದೆ.

ಕಳ್ಳ ಕಿಟಕಿಯಲ್ಲಿ ನೇತಾಡುತ್ತಾ, ಬಿಟ್ಟುಬಿಡುವಂತೆ ಪರಿಪರಿಯಾಗಿ ಬೇಡಿದ್ದಾನೆ. ಆದರೆ ಪ್ರಯಾಣಿಕರು ಪಾಠ ಕಲಿಸಲು ಬರೋಬ್ಬರಿ ಒಂದು ಕಿಲೋಮೀಟರ್ ದೂರ ಇದೇ ರೀತಿ ಎಳೆದೊಯ್ದಿದ್ದಾರೆ.

ರೈಲು ಹಳಿಗಳನ್ನು ಬದಲಿಸುವ ಬಳಿ ನಿಧಾನವಾಗಿದೆ. ಅಷ್ಟರಲ್ಲೇ ತನ್ನ ಗ್ಯಾಂಗ್‌ನ ಇತರ ಸದಸ್ಯರು ಆಗಮಿಸಿದ್ದಾರೆ. ಕೋಲು ಹಾಗೂ ಬಡಿಗೆ ಮೂಲಕ ಕಿಟಕಿಯಿಂದ ಪ್ರಯಾಣಿಕರ ಗಾಯಗೊಳಿಸಲು ಮುಂದಾಗಿದ್ದಾರೆ. ಇದರಿಂದ ಪ್ರಯಾಣಿಕರು ಕಳ್ಳನ ಬಿಟ್ಟಿದ್ದಾರೆ.ಈ ವಿಡಿಯೋವನ್ನು ಸಹ ಪ್ರಯಾಣಿಕರು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದೀಗ ಭಾರಿ ವೈರಲ್ ಆಗಿದೆ.

Related Articles

Latest Articles