Friday, July 19, 2024

ದಕ್ಷಿಣ ಕನ್ನಡ: ಬಸ್ಸಿನಿಂದ ಬಿದ್ದು ವ್ಯಕ್ತಿ ದುರ್ಮರಣ

ದಕ್ಷಿಣ ಕನ್ನಡ: ಕಿನ್ನಿಗೋಳಿ – ಮುಂಡ್ಕೂರು ರಾಜ್ಯ ಹೆದ್ದಾರಿಯ ಏಳಿಂಜೆ ದ್ವಾರದ ಬಳಿ ಕೂಲಿ ಕಾರ್ಮಿಕ ಬಸ್ಸಿನಿಂದ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆ.

ಮೃತ ಕೂಲಿ ಕಾರ್ಮಿಕನನ್ನು ಸ್ಥಳೀಯ ನಿವಾಸಿ ಗಿರೀಶ್‌ (45) ಎಂದು ಗುರುತಿಸಲಾಗಿದೆ. ಗಿರೀಶ್‌ ಅವರು ಮುಂಡ್ಕೂರು ದೇವಸ್ಥಾನದಲ್ಲಿ ಊಟ ಮಾಡಿ ಕಿನ್ನಿಗೋಳಿಗೆ ಹೋಗುವ ಬಸ್ಸಿನಲ್ಲಿ ಹತ್ತಿ ತನ್ನ ಮನೆಯಾದ ಏಳಿಂಜೆ ದ್ವಾರದ ಬಳಿ ಬಸ್ಸಿನಲ್ಲಿ ಇಳಿಯುತ್ತಿದ್ದಂತೆ ನಿರ್ವಾಹಕನ ಯಾವುದೇ ಸೂಚನೆ ಇಲ್ಲದೆ ಚಾಲಕ ಬಸ್ಸು ಚಲಾಯಿಸಿದ್ದ.

ಚಾಲಕನ ನಿರ್ಲಕ್ಷತೆಯ ಚಾಲನೆಯ ಪರಿಣಾಮ ಆಯತಪ್ಪಿ ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಮಂಗಳೂರು ಉತ್ತರ ಟ್ರಾಫಿಕ್‌ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಬಸ್ಸು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ಗಿರೀಶ್‌ ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Related Articles

Latest Articles