ಭಾರತೀಯ ವಾಯುಪಡೆಯ (ಐಎಎಫ್) ಪಿಲಾಟಸ್ ಪಿಸಿ 7 ಎಂಕೆ -2 ತರಬೇತಿ ವಿಮಾನವು ತೆಲಂಗಾಣದ ಮೇಡಕ್ ಜಿಲ್ಲೆಯ ತೂಪ್ರಾನ್ ನ ರಾವೆಲ್ಲಿ ಗ್ರಾಮದಲ್ಲಿ ಅಪಘಾತಕ್ಕೀಡಾಗಿದ್ದು, ಇಬ್ಬರು ಪೈಲಟ್ ಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾಗಿ ಸ್ವತಃ ಇಂಡಿಯನ್ ಏರ್ ಫೋರ್ಸ್ ಸಂಸ್ಥೆ ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.
ವಿಮಾನವು ದುಂಡಿಗಲ್ ವಾಯುಪಡೆ ಅಕಾಡೆಮಿಯಿಂದ ಹೊರಟಿತ್ತು.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪೈಲಟ್ಗಳ ಸಾವಿಗೆ ಸಂತಾಪ ಸೂಚಿಸಿದ್ದು, “ಹೈದರಾಬಾದ್ ಬಳಿ ನಡೆದ ಈ ಅಪಘಾತದಿಂದ ದುಃಖಿತನಾಗಿದ್ದೇನೆ. ಇಬ್ಬರು ಪೈಲಟ್ಗಳು ಪ್ರಾಣ ಕಳೆದುಕೊಂಡಿರುವುದು ತೀವ್ರ ದುಃಖ ತಂದಿದೆ. ಈ ದುರಂತದ ಸಮಯದಲ್ಲಿ, ನನ್ನ ಆಲೋಚನೆಗಳು ದುಃಖಿತ ಕುಟುಂಬಗಳೊಂದಿಗೆ ಇವೆ” ಎಂದು ಟ್ವೀಟ್ ಮಾಡಿದ್ದಾರೆ.
ತೆಲಂಗಾಣ ಟುಡೇ ಪ್ರಕಾರ, ಕೆಲವೇ ನಿಮಿಷಗಳಲ್ಲಿ ವಿಮಾನವು ಸುಟ್ಟು ಬೂದಿಯಾಯಿತು. ಏತನ್ಮಧ್ಯೆ, ಐಎಎಫ್ ವಿಮಾನದಲ್ಲಿ ಎಷ್ಟು ಜನರು ಇದ್ದರು ಎಂದು ಸ್ಥಳೀಯರಿಗೆ ಖಚಿತವಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.