ಟೋಕಿಯೋ: ಹೊಸ ವರ್ಷಕ್ಕೆ ಹೆಜ್ಜೆ ಇಡ್ತಿದ್ದಂತೆಯೇ ಪುಟ್ಟ ರಾಷ್ಟ್ರ ಜಪಾನ್ನನ್ನ ನೈಸರ್ಗಿಕ ವಿಕೋಪಕ್ಕೆ ತುತ್ತಾಗಿತ್ತು. ಭಯಾನಕ ಭೂಕಂಪಕ್ಕೆ ಜಪಾನ್ ಜನ ಕಂಗೆಟ್ಟು ಹೋಗಿದ್ದರು. ಸಾಲದ್ದಕ್ಕೆ ಸುನಾಮಿ ಬೇರೆ ಬರುತ್ತೆ ಎಂಬ ಆತಂಕವೂ ಕಾಡುವುದಕ್ಕೆ ಶುರುವಾಗಿತ್ತು. ಇದೆಲ್ಲಾ ಮುಗಿದು ಹೋಯಿತು ಅನ್ನುವಷ್ಟರಲ್ಲಿ ಮತ್ತೊಂದು ಶಾಕಿಂಗ್ ಸುದ್ದಿ ಜಪಾನ್‌ಗೆ ಆಘಾತ ನೀಡಿದೆ.
400 ಪ್ರಯಾಣಿಕರಿದ್ದ ವಿಮಾನವೊಂದಕ್ಕೆ ಬೆಂಕಿ ತಗುಲಿ ಧಗಧಗನೇ ಹೊತ್ತಿ ಉರಿದಿದೆ. ಟೋಕಿಯೋದಲ್ಲಿರುವ ಹನೆಡಾ ವಿಮಾನ ನಿಲ್ದಾಣದಲ್ಲಿ ಈ ಅವಘಡ ಸಂಭವಿಸಿದೆ. ರನ್‌ವೇಯಲ್ಲಿ ಲ್ಯಾಂಡ್ ಆಗುತ್ತಿದ್ದಾಗ ವಿಮಾನವೊಂದು ಇನ್ನೊಂದು ವಿಮಾನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿ ಉರಿದಿದೆ. ಕೂಡಲೇ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸ್ಥಳಾಂತರಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಇನ್ನು, ಲ್ಯಾಂಡಿಂಗ್ ವೇಳೆ ಕೋಸ್ಟ್ ಗಾರ್ಡ್ ಜೆಟ್‌ಗೆ ಪ್ರಯಾಣಿಕರ ವಿಮಾನ ಡಿಕ್ಕಿ ಹೊಡೆದ ಪರಿಣಾಮ ವಿಮಾನದಲ್ಲಿ ಆರು ಸಿಬ್ಬಂದಿಗಳಲ್ಲಿ ಐವರು ಸಾವನ್ನಪ್ಪಿದ್ದಾರೆ. ಜೊತೆಗೆ ವಿಮಾನದ ಕ್ಯಾಪ್ಟನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೆಟ್ರೋಪಾಲಿಟನ್ ಪೊಲೀಸರನ್ನು ಮಾಹಿತಿ ನೀಡಿದ್ದಾರೆ.