ತಮಿಳುನಾಡಿನ ಶಿವಗಂಗಾ ಜಿಲ್ಲೆಯಲ್ಲಿ ಬುಧವಾರ ಜಲ್ಲಿಕಟ್ಟು ಸ್ಪರ್ಧೆಯನ್ನು ವೀಕ್ಷಿಸುತ್ತಿದ್ದ ಇಬ್ಬರು ಪ್ರೇಕ್ಷಕರು ಗೂಳಿಗಳ ತಿವಿತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ. ಮೃತಪಟ್ಟವರಲ್ಲಿ ಓರ್ವ ಬಾಲಕನೆಂದು ತಿಳಿದುಬಂದಿದೆ.
ಗೂಳಿಗಳನ್ನು ಮಣಿಸುವ ಸ್ಪರ್ಧೆಯಾದ ಜಲ್ಲಿಕಟ್ಟನ್ನು ವೀಕ್ಷಿಸುತ್ತಿದ್ದವರ ಗುಂಪೊಂದರ ಮೇಲೆ ಗೂಳಿಗಳು ನುಗ್ಗಿದ್ದವು.
ಗೂಳಿಗಳ ತಿವಿತದಿಂದ ಗಂಭೀರಗಾಯಗೊಂಡ ಇಬ್ಬರು ಕೊನೆಯಿಸಿರೆಳೆದರೆಂದು ಮೂಲಗಳು ತಿಳಿಸಿವೆ.
ಪ್ರತ್ಯೇಕ ಘಟನೆಯೊಂದರಲ್ಲಿ ಮಂಗಳವಾರ ಪಾಲಮೇಡು ಜಿಲ್ಲೆಯಲ್ಲಿ ಜಲ್ಲಿಕಟ್ಟು ಸ್ಫರ್ಧೆ ವೇಳೆ 14 ಮಂದಿ ಸ್ಪರ್ಧಾಳುಗಳು ಹಾಗೂ 16 ಪ್ರೇಕ್ಷಕರು ಸೇರಿದಂತೆ ಸುಮಾರು 42 ಮಂದಿ ಗಾಯಗೊಂಡಿದ್ದರು.