Sunday, April 20, 2025

ಶಾಲಾ ಪಿಕ್‌ನಿಕ್ ಹೋಗಿದ್ದಾಗ ಭೀಕರ ದೋಣಿ ದುರಂತ; 14 ಮಂದಿ ಸಾವು, ಉಳಿದವರ ಸ್ಥಿತಿ ಗಂಭೀರ

ಖಾಸಗಿ ಶಾಲಾ ಮಕ್ಕಳು ಪ್ರವಾಸಕ್ಕೆಂದು ತೆರಳಿದ್ದಾಗ ಭೀಕರ ದೋಣಿ ದುರಂತ ಇಬ್ಬರ ಶಿಕ್ಷಕರು ಸಹಿತ ಹದಿನಾಲ್ಕು ಮಕ್ಕಳು ಅಸುನೀಗಿದ ದುರಂತ ಘಟನೆ ಸಂಭವಿಸಿದೆ. ಶಾಲಾ ಮಕ್ಕಳು ಪ್ರಯಾಣಿಸುತ್ತಿದ್ದ ದೋಣಿ ಗುಜರಾತ್‌ನ ವಡೋದರಾದ ಹರ್ನಿ ಕೆರೆಯಲ್ಲಿ ಮಗುಚಿ ಬಿದ್ದು ಅವಘಡ ನಡೆದಿದೆ‌.

27 ಶಾಲಾ ಮಕ್ಕಳು ಪ್ರವಾಸಕ್ಕೆಂದು ಹರ್ನಿ ಕೆರೆಯಲ್ಲಿ ಪ್ರಯಾಣ ಮಾಡುತ್ತಿದ್ದರು. ಮಾರ್ಗ ಮಧ್ಯೆ ದೋಣಿ ಅಪಾಯಕ್ಕೆ ಗುರಿಯಾಗಿದೆ. ಇದುವರೆಗೂ 14 ಶವವನ್ನು ಹೊರಗೆ ತೆಗೆಯಲಾಗಿದೆ. ಉಳಿದ ಮಕ್ಕಳನ್ನು ರಕ್ಷಿಸಲಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಸ್ಪತ್ರೆಗೆ ದಾಖಲಾದ ಶಾಲಾ ಮಕ್ಕಳ ಸ್ಥಿತಿಯು ಗಂಭೀರವಾಗಿದೆ.

27 ಶಾಲಾ ವಿದ್ಯಾರ್ಥಿಗಳ ಪೈಕಿ 21 ವಿದ್ಯಾರ್ಥಿಗಳು ಪತ್ತೆಯಾಗಿದ್ದಾರೆ. ಕೆರೆಯಲ್ಲಿ 6 ವಿದ್ಯಾರ್ಥಿಗಳು ನಾಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ. ನಾಪತ್ತೆಯಾಗಿರುವ 6 ಶಾಲಾ ಮಕ್ಕಳು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ದೋಣಿ ದುರಂತಕ್ಕೆ ಕಾರಣವೇನು?
ಹರ್ನಿ ಕೆರೆಯ ದೋಣಿಯಲ್ಲಿ 27 ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು. ಯಾರೊಬ್ಬರು ಲೈಫ್ ಜಾಕೆಟ್ ಧರಿಸದೇ ದೋಣಿ ವಿಹಾರ ಮಾಡುತ್ತಾ ಇದ್ದಿದ್ದೇ ಈ ದುರ್ಘಟನೆಗೆ ಕಾರಣವಾಗಿದೆ. ಕೆರೆಯಲ್ಲಿ ದೋಣಿ ಮಗುಚಿದ ಮೇಲೆ ರಕ್ಷಣಾ ಧಾವಿಸಿದ ಸಿಬ್ಬಂದಿ 14 ವಿದ್ಯಾರ್ಥಿಗಳು ಸಾವನ್ನಪ್ಪಿರೋದನ್ನ ಖಚಿತಪಡಿಸಿದ್ದಾರೆ. 7 ವಿದ್ಯಾರ್ಥಿಗಳನ್ನ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Related Articles

Latest Articles