ರಾಜ್ಯಪಾಲರ ಪ್ರಾಸಿಕ್ಯೂಷನ್ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದ ಸಿಎಂಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಈ ನಡುವೆ ಸಿದ್ದು ಬೆಂಬಲಿಸಿ ಮಂಗಳೂರಿನಲ್ಲೂ ಪ್ರತಿಭಟನೆ ನಡೆದಿದೆ. ಈ ವೇಳೆ ಐವನ್ ಡಿಸೋಜಾ, ತಮ್ಮ ಮಾತಿನಿಂದಲೇ ಸಮಸ್ಯೆಯೊಂದನ್ನ ಮೈ ಮೇಲೆ ಎಳೆದುಕೊಂಡಿದ್ದಾರೆ.

ಗವರ್ನರ್ ವರ್ಸಸ್ ಸರ್ಕಾರದ ನಡುವಿನ ಸಮರ ನಡೆಯುತ್ತಿದೆ. ರಾಜಕೀಯದ ಹೊರತಾಗಿ ಕಾನೂನು ಹೋರಾಟದ ಹಾದಿ ಶುರುವಾಗಿತ್ತು. ಮುಡಾ ಹಗರಣದಲ್ಲಿ ಸಂಕಷ್ಟಕ್ಕೆ ಸಿಲುಕಿದ ಸಿದ್ದರಾಮಯ್ಯ, ಹೈಕೋರ್ಟ್ನಲ್ಲಿ ಮಹಾ ಹೋರಾಟವೇ ನಡೆಸಿದ್ದು, ಸಿದ್ದರಾಮಯ್ಯಗೆ ವಾರದ ರಿಲೀಫ್ ಸಿಕ್ಕಿದೆ.
ಇನ್ನು ಮಂಗಳೂರಿನಲ್ಲಿ ಪ್ರತಿಭಟನೆ ವೇಳೆ ಐವನ್ ಡಿಸೋಜಾ ಎಡವಟ್ಟೊಂದನ್ನ ಮಾಡಿಕೊಂಡಿದ್ದಾರೆ. ತಮ್ಮ ಮಾತಿನಿಂದಲೇ ಸಮಸ್ಯೆಯನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. ರಾಜ್ಯಪಾಲರನ್ನ ರಾಷ್ಟ್ರಪತಿ ಹಿಂದಕ್ಕೆ ಕರೆಸಿಕೊಳ್ಳದಿದ್ರೆ ಬಾಂಗ್ಲಾ ಪ್ರಧಾನಿಗೆ ಆದ ಗತಿಯೇ ಬರುತ್ತೆ ಅನ್ನು ವಾರ್ನಿಂಗ್ ಗವರ್ನರ್ಗೆ ಕೊಟ್ಟಿದ್ದರು.

ಯಾವಾಗ ಇಂಥದ್ದೊಂದು ಹೇಳಿಕೆಯನ್ನ ಐವಾನ್ ಡಿಸೋಜಾ ನೀಡಿದರೋ, ಇದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಐವನ್ ಡಿಸೋಜಾ ವಿರುದ್ಧ ಎಫ್ಐಆರ್ ದಾಖಲು ಮಾಡುವಂತೆ ಒತ್ತಾಯಿಸಿ ಮಂಗಳೂರಿನಲ್ಲಿ ಪ್ರತಿಭಟನೆಯೂ ನಡೆದಿದೆ. ಬಿಜೆಪಿ ಯುವಮೋರ್ಚಾದ ಪಡೆ ಮಂಗಳೂರಿನ ಬರ್ಕೆ ಪೊಲೀಸ್ ಠಾಣೆ ಮುಂಭಾಗ ಧರಣಿ ಕುಳಿತು ವಿರೋಧಿಸಿದ್ದಾರೆ. ಇನ್ನು ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.