ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಈ ಹಿಂದೆ ಉಡಾವಣೆ ಮಾಡಿದ್ದ ಚಂದ್ರಯಾನ 3 ಲಾಂಚ್ ವೆಹಿಕಲ್ ಮೇಲ್ಭಾಗವು ಭೂಮಿಯ ವಾತಾವರಣಕ್ಕೆ ಮರು ಪ್ರವೇಶಿಸಿ, ಉತ್ತರ ಫೆಸಿಪಿಕ್ ಸಮುದ್ರದಲ್ಲಿ ಬಿದ್ದಿದೆ ಎಂದು ತಿಳಿದುಬಂದಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಈ ಬಗ್ಗೆ ಮಾಹಿತಿ ನೀಡಿದ್ದು, “ಎಲ್‌ವಿಎಂ3 ಎಂ4 ಉಡಾವಣಾ ವಾಹನದ ಕ್ರಯೋಜೆನಿಕ್ ಮೇಲಿನ ಹಂತವು ಭೂಮಿಯ ವಾತಾವರಣಕ್ಕೆ ಬುಧವಾರ ಮರು ಪ್ರವೇಶ ಮಾಡಿದೆ.
ಫೆಸಿಪಿಕ್ ಸಮುದ್ರದಲ್ಲಿ ಬಿದ್ದಿರುವ ಈ ರಾಕೆಟ್ ಬಾಡಿ (NORAD id 57321) ಜುಲೈ 14 ರಂದು 21.3 ಡಿಗ್ರಿ ಇಳಿಜಾರಿನೊಂದಿಗೆ 133 ಕಿಮೀ x 35823 ಕಿಮೀ ಉದ್ದೇಶಿತ ಕಕ್ಷೆಗೆ ಚಂದ್ರಯಾನ-3 ಬಾಹ್ಯಾಕಾಶ ನೌಕೆಯನ್ನು ಯಶಸ್ವಿಯಾಗಿ ಇಂಜೆಕ್ಟ್ ಮಾಡಿದ ವಾಹನದ ಭಾಗವಾಗಿದೆ ಎಂದು ಇಸ್ರೋ ಹೇಳಿದೆ.