ಸಿಯೋಲ್: ದಕ್ಷಿಣ ಕೊರಿಯಾದಲ್ಲಿ ರೊಬಾಟ್‌ನಿಂದಾಗಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ. ದಕ್ಷಿಣ ಜಿಯೊಂಗ್ ಸಾಂಗ್ ಪ್ರಾಂತ್ಯದ ಕೃಷಿ ಉತ್ಪನ್ನಗಳ ವಿತರಣಾ ಕೇಂದ್ರದಲ್ಲಿ ಉದ್ಯೋಗಿ ರೊಬಾಟ್‌ನ ಕಾರ್ಯಚರಣೆ ಪರಿಶೀಲಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಮೆಣಸಿನಕಾಯಿಯ ಪೆಟ್ಟಿಗೆಗಳನ್ನು ರೊಬಾಟ್ ತನ್ನ ತೋಳುಗಳಿಂದ ಎತ್ತಿಕೊಂಡು ಪ್ಯಾಲೆಟ್ ಗಳ ಮೇಲೆ ಇರಿಸುವ ಕೆಲಸ ಮಾಡುತ್ತಿತ್ತು.
ಆದರೆ ಪೆಟ್ಟಿಗೆ ಮತ್ತು ಮನುಷ್ಯನ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವಲ್ಲಿ ರೊಬಾಟ್ ವಿಫಲವಾಗಿ, ಪೆಟ್ಟಿಗೆಯ ಬದಲಿಗೆ ವ್ಯಕ್ತಿಯನ್ನು ಎತ್ತಿಕೊಂಡು ಕನ್ವೇಯರ್ ಬೆಲ್ಟ್‌ನಲ್ಲಿ ಇರಿಸಿದೆ. ಇದರಿಂದ 40 ವರ್ಷದ ಆ ವ್ಯಕ್ತಿಯ ಮುಖ ಮತ್ತು ಎದೆ ಭಾಗ ನಜ್ಜುಗುಜ್ಜಾಗಿದೆ.