ಬೆಂಗಳೂರಿನಲ್ಲಿ ಬರೆಯಬೇಕಿದ್ದ ನ್ಯಾಯಾಂಗ ಸೇವೆಯ ಪರೀಕ್ಷೆಯನ್ನು ತುಂಬು ಗರ್ಭಿಣಿ ಮಹಿಳೆಯೋರ್ವಳು ಮಂಗಳೂರಿನಲ್ಲೇ ಬರೆದ ಅಪರೂಪದ ಘಟನೆ ನಡೆದಿದೆ.
ಬೆಂಗಳೂರಿನಲ್ಲಿ ನಿಗದಿಯಾಗಿದ್ದ ನ್ಯಾಯಾಂಗ ಸೇವೆಯ ಪರೀಕ್ಷೆಗೆ ಮಂಗಳೂರಿನ ನ್ಯಾಯವಾದಿ ನೇತ್ರಾವತಿ ಆಯ್ಕೆಯಾಗಿದ್ದಳು.
ಎಂಟುವರೆ ತಿಂಗಳ ತುಂಬು ಗರ್ಭಿಣಿಯಾಗಿರುವ ನ್ಯಾಯವಾದಿ ನೇತ್ರಾವತಿ ತನಗೆ ಬೆಂಗಳೂರಿಗೆ ತೆರಳಿ ಪರೀಕ್ಷೆ ಬರೆಯಲು ಸಾಧ್ಯವಿಲ್ಲ. ಹಾಗಾಗಿ ಮಂಗಳೂರಿನಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು ಎಂದು ನೇತ್ರಾವತಿ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.
ಸಿವಿಲ್ ನ್ಯಾಯಾಧೀಶರ ನೇಮಕಾತಿ ಸಂಬಂಧಿಸಿದ ಹೈಕೋರ್ಟ್‌ನ ಸಮಿತಿಯು ಈ ಅರ್ಜಿಯನ್ನು ಪುರಸ್ಕರಿಸಿ ಅಭ್ಯರ್ಥಿಯ ಮನವಿಯಂತೆ ಮಂಗಳೂರಿನಲ್ಲೇ ಪರೀಕ್ಷೆ ಬರೆಯಲು ಅನುಮತಿ ನೀಡಿತ್ತು.
ರಾಜ್ಯ ಹೈಕೋರ್ಟ್‌ನ ವಿಶೇಷ ಅನುಮತಿ ಹಿನ್ನೆಲೆಯಲ್ಲಿ ನೇತ್ರಾವತಿ ನ್ಯಾಯಾಂಗ ಸೇವೆಯ ಮುಖ್ಯ ಪರೀಕ್ಷೆಯನ್ನು ಮಂಗಳೂರಿನ ನ್ಯಾಯಾಲಯದ ಸಂಕೀರ್ಣದ ಕಟ್ಟಡದಲ್ಲಿ ಶನಿವಾರ ಮತ್ತು ರವಿವಾರ ಪರೀಕ್ಷೆ ಬರೆದಿದ್ದಾರೆ.
ಮುನ್ನೆಚ್ಚರಿಕೆಯ ಕ್ರಮವಾಗಿ ನ್ಯಾಯಾಲಯದ ಆವರಣದಲ್ಲಿ ಆ್ಯಂಬುಲೆನ್ಸ್ ವಾಹನವನ್ನು ಸಜ್ಜುಗೊಳಿಸಲಾಗಿತ್ತು.