Friday, July 4, 2025

ಭಾರತದ 5G ಮಾರುಕಟ್ಟೆ ಅಮೆರಿಕಕ್ಕಿಂತ ದೊಡ್ಡದು; ನರೇಂದ್ರ ಮೋದಿ

ಭಾರತದ 5G ಮಾರುಕಟ್ಟೆ ಅಮೆರಿಕಕ್ಕಿಂತ ದೊಡ್ಡದಾಗಿದೆ. ಇದು ಕೇವಲ ಎರಡು ವರ್ಷಗಳಲ್ಲಿ ಸಾಧ್ಯವಾಗಿದೆ. ಈಗ ಭಾರತವು ಮೇಡ್-ಇನ್-ಇಂಡಿಯಾ 6G ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ನ್ಯೂಯಾರ್ಕ್​ನಲ್ಲಿ ಮಾತನಾಡಿದರು. ಶೀಘ್ರದಲ್ಲೇ ಮೇಡ್ ಇನ್ ಇಂಡಿಯಾ ಚಿಪ್​ ತಯಾರಿಕೆಯನ್ನು ಭಾತರದಲ್ಲಿ ಕಾಣುತ್ತೀರಿ. ಇಂದು ಪ್ರಪಂಚದ ದೊಡ್ಡ ದೊಡ್ಡ ಬ್ರಾಂಡ್ ಮೊಬೈಲ್‌ಗಳು ಭಾರತದಲ್ಲಿಯೇ ತಯಾರಿಸಲ್ಪಡುತ್ತವೆ.

ಭಾರತವು ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ತಯಾರಿಕಾ ದೇಶವಾಗಿದೆ. ಭಾರತವು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಪರಿಕಲ್ಪನೆಯನ್ನು ಜಗತ್ತಿಗೆ ನೀಡಿದೆ ಎಂದು ಹೇಳಿದ್ದಾರೆ.

Related Articles

Latest Articles