ಜೈಪುರ: ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಮಸೀದಿಯೊಂದರಲ್ಲಿ ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮೌಲ್ವಿಯನ್ನು ಸೆ.೨೨ರ ಭಾನುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿ ತನ್ನ ಮನೆಯ ಹೊರಗೆ ಆಟವಾಡುತ್ತಿದ್ದಾಗ ಆರೋಪಿ ಅಸ್ಜದ್ (22) ಅವಳನ್ನು ಒಳಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಬಾಲಕಿಯನ್ನು ಹುಡುಕಿಕೊಂಡು ಆಕೆಯ ತಾಯಿ ಅವರ ಮನೆಯ ಎದುರು ಇರುವ ಮಸೀದಿಯೊಳಗೆ ಹೋದಾಗ ವಿಷಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂತ್ರಸ್ಥೆಯ ತಾಯಿ ಮಸೀದಿ ಹೋಗುತ್ತಿದ್ದಂತೆ ಬಾಲಕಿಯ ಅರಚಾಟ ಕೇಳಿಬಂದಿದೆ. ತಾಯಿ ಬರುತ್ತಿದ್ದಂತೆ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ. ಸದ್ಯ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸ್‌ಎಚ್‌ಒ ರಾಜ್‌ಗಢ ರಾಮಜಿಲಾಲ್ ಮೀನಾ ತಿಳಿಸಿದ್ದಾರೆ.