Saturday, June 28, 2025

ಮಹಿಳೆ ಜತೆ ಅಕ್ರಮ ಸಂಬಂಧ; ಬೆಡ್​ ರೂಮ್​ನಲ್ಲಿ ಹೆಂಡತಿಗೆ ರೆಡ್​​ ಹ್ಯಾಂಡಾಗಿ ಸಿಕ್ಕಿಬಿದ್ದ ಪತಿರಾಯ – ವಿಡಿಯೋ ವೈರಲ್

ಪರ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಗಂಡ ಹೆಂಡತಿಗೆ ರೆಡ್​​ ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಘಟನೆ ವಿಶಾಖಪಟ್ನಂ ಎಂಬಲ್ಲಿ ನಡೆದಿದೆ. ಆಂಧ್ರದ ವಿಶಾಖಪಟ್ನಂ ಸಿಟಿಯಲ್ಲಿ ಈ ಘಟನೆ ನಡೆದಿದ್ದು, ಹೆಂಡತಿ ತನ್ನ ಕುಟುಂಬಸ್ಥರೊಂದಿಗೆ ಹೋಗಿ ಗಂಡನನ್ನು ರೆಡ್​ ಹ್ಯಾಂಡ್​ ಆಗಿ ಹಿಡಿದಿದ್ದಾಳೆ.

ಇನ್ನು, ಗಂಡ ಪರ ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ. ಇಬ್ಬರು ಹಲವು ದಿನಗಳಿಂದ ಜೊತೆಯಲ್ಲೇ ಇದ್ದರು. ಈ ವಿಚಾರದಿಂದ ಬೇಸತ್ತ ಹೆಂಡತಿ ಗಂಡನೊಂದಿಗೆ ಈ ಕುರಿತು ಹಲವು ಬಾರಿ ಜಗಳ ಕೂಡ ಮಾಡಿದ್ದಳು ಎಂದು ತಿಳಿದು ಬಂದಿದೆ.

ಸದ್ಯ ಗಂಡ ಪರ ಮಹಿಳೆ ಜೊತೆಗೆ ಬೆಡ್​ ರೂಮ್​ನಲ್ಲಿ ಇದ್ದಾಗ ಸಿಕ್ಕಿಬಿದ್ದಿದ್ದಾನೆ. ಬೆಡ್​ ರೂಮ್​ ತೆಗೆದು ಒಳಗೆ ಹೋಗುತ್ತಿದ್ದಂತೆಯೇ ಗಂಡ, ಹೆಂಡತಿ ಮಧ್ಯೆ ಜಗಳ ಆಗಿದೆ. ಹೆಂಡತಿ ಪರ ಮಹಿಳೆಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಮೂರು ವರ್ಷದಿಂದ ಎಲ್ಲಿಗೆ ಹೋಗಿದ್ದೆ? ಎಂದು ಹೆಂಡತಿಗೆ ಗಂಡ ಪ್ರಶ್ನೆ ಮಾಡಿರುವುದು ವಿಡಿಯೋದಲ್ಲಿ ರೆಕಾರ್ಡ್​ ಆಗಿದೆ.

ಈ ಬಗ್ಗೆ ಮಾತಾಡಿದ ಮಹಿಳೆ, ನನ್ನ ಗಂಡ ಒಬ್ಬ ಕಾಮುಕ. ಹೆಣ್ಣುಮಕ್ಕಳು ಎಂದರೆ ಜೊಲ್ಲು ಸುರಿಸುತ್ತಿದ್ದ. ನಾನು ಏನಾದ್ರೂ ಪ್ರಶ್ನೆ ಮಾಡಿದ್ರೆ ಸಿಗರೇಟ್​ನಲ್ಲಿ ಸುಡುತ್ತಿದ್ದ, ದೈಹಿಕವಾಗಿ ಹಲ್ಲೆ ನಡೆಸುತ್ತಿದ್ದ ಎಂದಿದ್ದಾರೆ.

ಈಗ ಅವಳು ನನ್ನ ಹೆಂಡತಿ ಎಂದು ಹೇಳಿಕೆ ನೀಡಿದ್ದಾನೆ. ನಾನು ಯಾವುದೇ ದುಡ್ಡು ಡಿಮ್ಯಾಂಡ್​ ಮಾಡಿಲ್ಲ. 3 ಕೋಟಿ ದುಡ್ಡು ಕೇಳಿದ್ದೇನೆ ಎಂಬುದು ಸುಳ್ಳು. ಅವನು ಕೆಲಸಕ್ಕೂ ಹೋಗುತ್ತಿಲ್ಲ, ಮತ್ತೆ ಹೇಗೆ 40 ಸಾವಿರ ರೆಂಟೆಡ್​ ಅಪಾರ್ಟ್​ಮೆಂಟ್​ನಲ್ಲಿ ಇದಾನೋ ಗೊತ್ತಿಲ್ಲ ಎಂದು ಆರೋಪಿಸಿದ್ದಾರೆ.

Related Articles

Latest Articles