Tuesday, January 21, 2025

ಶಿವಮೊಗ್ಗ: ಆರು ಸಾವಿರ ಲಂಚ ಸ್ವೀಕಾರ ; ಗ್ರಾಮ ಆಡಳಿತಾಧಿಕಾರಿ ಲೋಕಾಯುಕ್ತ ಬಲೆಗೆ

ಶಿವಮೊಗ್ಗ: ತಾಲೂಕು ಕಸಬಾ -1 ಹೋಬಳಿ, ಗಾಡಿಕೊಪ್ಪ ವೃತ್ತ, ಗ್ರಾಮ ಅಡಳಿತ ಅಧಿಕಾರಿ ಸುರೇಶ್ ಜಿ. ಬಿನ್ ನಾಗಪ್ಪಜಿ ಎಂಬುವವರು ಜಮೀನು ಖಾತೆ ಮಾಡಿಕೊಡಲು ಆರು ಸಾವಿರ ರೂ.ಗಳ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.

ನಗರದ ಕೃಷಿನಗರ ವಾಸಿ ಸಂಕೇತ್ ಎಂಬುವವರು ಖರೀದಿಸಿದ ಜಮೀನನ್ನು ತನ್ನ ತಾಯಿ ವೀಣಾ ಬಿ.ಎಂ. ಎಂಬುವವರ ಹೆಸರಿಗೆ ನೋಂದಣಿ ಮಾಡಿಸಿಕೊಂಡಿರುತ್ತಾರೆ.

ವಿನೋಭನಗರ ಪ್ರೀಡಂ ಪಾರ್ಕ್‍ನಲ್ಲಿರುವ ಗ್ರಾಮ ಆಡಳಿತ ಅಧಿಕಾರಿಗಳ ಕಚೇರಿ ಹೋಗಿ ವಿ ಎ ಆಗಿರುವ ಸುರೇಶ್ ಜಿ. ಬಳಿ ತಾವು ಖರೀದಿಸಿದ ಜಮೀನನ್ನು ಖಾತೆ ಮಾಡಿಕೊಡುವಂತೆ ಕೇಳಿಕೊಂಡಿದ್ದಾರೆ. ಆಗ ಕೆಲಸ ಮಾಡಿಕೊಡಲು ರೂ. 6000/-ಗಳ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ವಿಚಾರವಾಗಿ ವಿರುದ್ಧ ವಿವ ವಿರುದ್ಧ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿತ್ತು.

ಕೂಡಲೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಲಂಚ ಸ್ವೀಕರಿಸುವಾಗ ಬಂಧಿಸಿದ್ದಾರೆ.

Related Articles

Latest Articles