Wednesday, February 19, 2025

ಮಾನವನ ಮೆದುಳಿನಲ್ಲಿ ಮೊದಲ ರೋಬೋಟ್ ಚಿಪ್ ಅಳವಡಿಕೆ ಯಶಸ್ವಿ: ಎಲಾನ್ ಮಸ್ಕ್

ನ್ಯೂರಾಲಿಂಕ್ ಸಂಸ್ಥೆ ಮೊದಲ ಬಾರಿಗೆ ಮಾನವನ ಮೆದುಳಿನಲ್ಲಿ ಚಿಪ್‌ ಒಂದನ್ನು ಅನ್ನು ಅಳವಡಿಸಿದ್ದು, ರೋಗಿಯು ಚೇತರಿಸಿಕೊಳ್ಳುತ್ತಿದ್ದಾನೆ. ನರಕೋಶಗಳ ಪತ್ತೆ (ನ್ಯೂರಾನ್ ಸ್ಪೈಕ್ ಡಿಟೆಕ್ಷನ್) ನಿಖರವಾಗಿದೆ ಎಂದು ಎಲಾನ್ ಮಸ್ಕ್ ತಮ್ಮ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಎಲಾನ್ ಮಸ್ಕ್ ಅವರ ಒಡೆತನದ ನ್ಯೂರಾಲಿಂಕ್ ಕಂಪನಿಯು ಮಾನವನ ಮೆದುಳಿಗೆ ಕೃತಕ ಬುದ್ಧಿಮತ್ತೆ ಒಳಗೊಂಡಿರುವ ಬ್ರೈನ್ ಚಿಪ್‌ ಅಳವಡಿಸುವಲ್ಲಿ ಯಶಸ್ವಿಯಾಗಿದ್ದು, ಈ ಪ್ರಯೋಗವು ಭರವಸೆಯ ಫಲಿತಾಂಶವನ್ನು ನೀಡುತ್ತಿದೆ ಎಂದು ಮಸ್ಕ್ ತಮ್ಮ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ಸೋಮವಾರ(ಜ.29), ಮೊದಲ ಬಾರಿಗೆ ಮಾನವನ ಮೆದುಳಿನಲ್ಲಿ ನ್ಯೂರಾಲಿಂಕ್ ಅನ್ನು ಅಳವಡಿಸಲಾಗಿದ್ದು, ರೋಗಿಯು ಚೇತರಿಸಿಕೊಳ್ಳುತ್ತಿದ್ದಾನೆ. ನರಕೋಶಗಳ ಪತ್ತೆ (ನ್ಯೂರಾನ್ ಸ್ಪೈಕ್ ಡಿಟೆಕ್ಷನ್) ನಿಖರವಾಗಿದೆ ಎಂದು ಮಸ್ಕ್ ಹೇಳಿದ್ದಾರೆ.

ಏತನ್ಮಧ್ಯೆ, ಅಮೆರಿಕನ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್‌ಡಿಎ) ಕಳೆದ ವರ್ಷ ಮೇ ತಿಂಗಳಲ್ಲಿ ಮಾನವ ಮೆದುಳು ನೇರವಾಗಿ ಕಂಪ್ಯೂಟರ್‌ನೊಂದಿಗೆ ಸಂಪರ್ಕ ಸಾಧಿಸುವ ‘ಬ್ರೈನ್-ಕಂಪ್ಯೂಟರ್ ಇಂಟರ್ಫೇಸ್’ (ಬಿಸಿಐ) ಪ್ರಯೋಗಗಳನ್ನು ಅನುಮೋದಿಸಿತು. ನ್ಯೂರಾಲಿಂಕ್ ಸಂಸ್ಥೆ ಸರ್ಜಿಕಲ್ ರೋಬೋಟ್ (ಆರ್‌1) ಎಂಬ ಕೃತಕ ಬುದ್ಧಿಮತ್ತೆ ಒಳಗೊಂಡಿರುವ ಬ್ರೈನ್ ಚಿಪ್‌ ಒಂದನ್ನು ಅಭಿವೃದ್ಧಿಪಡಿಸಿದೆ.

ಈಗಾಗಲೇ ಈ ಬ್ರೈನ್ ಚಿಪ್ ಅನ್ನು ಹಂದಿಗಳು ಮತ್ತು ಮಂಗಗಳಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಗಿತ್ತು. ಈ ಉಪಕರಣವು ಅತ್ಯಂತ ಸುರಕ್ಷಿತ ಮತ್ತು ವಿಶ್ವಾಸಾರ್ಹವಾಗಿದೆ ಎಂದು ನ್ಯೂರಾಲಿಂಕ್ ಕಂಪನಿ ತಜ್ಞರು ಹೇಳುತ್ತಾರೆ. ಮಂಗವೊಂದು ಅದರ ಸಹಾಯದಿಂದ ಪಾಂಗ್ ವಿಡಿಯೋ ಗೇಮ್ ಆಡಿದ್ದು ಕೂಡ ಬಯಲಾಗಿದೆ.

ಈ ಪ್ರಯೋಗದ ಮುಖ್ಯ ಗುರಿ ಮಾನವ ಸಾಮರ್ಥ್ಯಗಳನ್ನು ಉತ್ತೇಜಿಸುವುದು ಮತ್ತು ಪಾರ್ಕಿನ್ಸನ್‌ನಂತಹ ನರವೈಜ್ಞಾನಿಕ ಕಾಯಿಲೆಗಳಿಗೆ ಚಿಕಿತ್ಸೆ ನೀಡುವುದು ಎಂದು ಸಂಸ್ಥೆ ಹೇಳಿದೆ. 5 ನಾಣ್ಯಗಳ ಗಾತ್ರದ ಚಿಪ್ ಅನ್ನು ವ್ಯಕ್ತಿಯ ಮೆದುಳಿನಲ್ಲಿ ಶಸ್ತ್ರಚಿಕಿತ್ಸೆಯ ಮೂಲಕ ಅಳವಡಿಸಲಾಗುತ್ತದೆ. ಈ ಚಿಪ್ ತಂತ್ರಜ್ಞಾನವನ್ನು ಆಧರಿಸಿ ಕಾರ್ಯನಿರ್ವಹಿಸುತ್ತದೆ. ಈಗಾಗಲೇ ನ್ಯೂರಾಲಿಂಕ್ 400 ಕ್ಕೂ ಹೆಚ್ಚು ವೃತ್ತಿಪರರನ್ನು ನೇಮಿಸಿಕೊಂಡಿದ್ದು, ಪ್ರಯೋಗಗಳಿಗಾಗಿ 363 ಮಿಲಿಯನ್ ಡಾಲರ್ ಹಣವನ್ನು ವ್ಯಯಿಸಿದ್ದು, ಪ್ರಯೋಗಗಳನ್ನು ಮುಂದುವರೆಸುತ್ತಿದೆ.

Related Articles

Latest Articles