ಗದಗ: ವಿವಾಹಿತ ಅನ್ಯಕೋಮಿನ ವ್ಯಕ್ತಿಯೊಬ್ಬ ತಂಗಿ ತಂಗಿ ಎನ್ನುತ್ತಲೇ ಹಿಂದೂ ಯುವತಿಯನ್ನು ಬುಟ್ಟಿಗೆ ಬೀಳಿಸಿ, ಕಿಡ್ನಾಪ್ ಮಾಡಲಾಗಿದೆ ಎಂದು ಕುಟುಂಬಸ್ಥರು ದೂರು ನೀಡಿದ್ದಾರೆ. ಈ ಬಗ್ಗೆ ಬೆಟಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮುಸ್ಲಿಂ ಯುವಕನಿಗೆ ಮದುವೆಯಾಗಿದ್ದರೂ ಹಿಂದೂ ಯುವತಿ ಜೊತೆಗೆ ಪ್ರೀತಿಯ ನಾಟಕವಾಡುತ್ತಿದ್ದಾನೆ. ತಂಗಿ ತಂಗಿ ಅಂತಾ ಕರೆಯುತ್ತಿದ್ದ ಈತನ ಮೋಸದ ಜಾಲಕ್ಕೆ ತನ್ನ ಮಗಳು ಬಲಿಯಾದಳು ಎಂದು ಪೋಷಕರು ಕಣ್ಣೀರು ಹಾಕುತ್ತಿದ್ದಾರೆ.
ಗದಗ ಬೆಟಗೇರಿ ಅವಳಿ ನಗರದ, ಮಂಜುನಾಥ ನಗರದ 19 ವರ್ಷದ ಹಿಂದೂ ಯುವತಿಯನ್ನು ವಿವಾಹಿತ ಮುಸ್ಲಿಂ ಯುವಕ ಅಮೀರ್ ಕುಕನೂರು (30) ಎಂಬಾತ ಸಂಪರ್ಕದಲ್ಲಿದ್ದ. ತಂಗಿ ತಂಗಿ ಅಂತ ಕರೆಯುತ್ತಿದ್ದನು. ಅಷ್ಟೇ ಅಲ್ಲದೆ, ಹಿಂದೂ ಧರ್ಮದ ಇನ್ನೂ ಇಬ್ಬರು ಯುವತಿಯರ ಜೊತೆ ಪ್ರೀತಿ ಪ್ರೇಮ ಅಂತಾ ನಾಟಕವಾಡುತ್ತಿದ್ದಾನೆ ಎನ್ನುವ ಆರೋಪವೂ ಇದೆ.
ಜನವರಿ 16 ರಂದು ಯುವತಿಯನ್ನು ಅಪಹರಣ ಮಾಡಿದ್ದಾನೆ ಎಂದು ಪೋಷಕರು ಬೆಟಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಂತರ ಗದಗ ಎಸ್ಪಿಗೆ ಮನವಿ ಸಲ್ಲಿಸಿ, ಇದು ಲವ್ ಜಿಹಾದ್ ಪ್ರಕರಣವಾಗಿದ್ದು, ನಮ್ಮ ಮಗಳನ್ನು ಪತ್ತೆ ಮಾಡಿಕೊಡುವಂತೆ ಬೇಡಿಕೊಳ್ಳುತ್ತಿದ್ದಾರೆ. ಆದರೆ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಮಗಳು ಅನ್ಯಕೋಮಿನ ವ್ಯಕ್ತಿಯೊಂದಿಗೆ ಹೋದ ವಿಚಾರ ತಿಳಿದ ತಂದೆ, ತಾಯಿ ಆತ್ಮಹತ್ಯೆಗೆ ಯತ್ನಿಸಿರುವ ವಿಚಾರವೂ ಬೆಳಕಿಗೆ ಬಂದಿದೆ. ಈ ವಿಷಯದಿಂದ ನೊಂದು ನಾನು, ನನ್ನ ಹೆಂಡತಿ ಆತ್ಮಹತ್ಯೆ ಯತ್ನಿಸಿದ್ದೇವು. ಸಂಬಂಧಿಕರು ನಮ್ಮನ್ನು ಬದುಕಿಸಿದ್ದಾರೆ ಎಂದು ಟಿವಿ9 ಕನ್ನಡ ಸುದ್ದಿ ಸಂಸ್ಥೆ ಯುವತಿಯ ತಂದೆ ಹೇಳಿದ್ದಾಗಿ ಮಾಧ್ಯಮ ವರದಿ ಮಾಡಿದೆ.